Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸ್ನೇಹಿತರಿಂದಲೇ ಹತ್ಯೆಯಾದ ರೌಡಿಶೀಟರ್ ಸುಧೀರ್

ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಕೆರೆ ಗ್ರಾಮದಲ್ಲಿ ಹಾಡು ಹಗಲೇ ರೌಡಿಶೀಟರ್ ಸುಧೀರ್ (36) ಎಂಬಾತನನ್ನು ತಲೆ ಕತ್ತರಿಸಿ ಹತ್ಯೆ ಮಾಡಿರುವ ಭೀಕರ ಘಟನೆ ಗುರುವಾರ ನಡೆದಿದೆ.

ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿಕೊಂಡು ಕುಳಿತಿದ್ದ ಗೆಳೆಯರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಜಗಳದಿಂದ ಬೇಸತ್ತು ಹೊರ ಬಂದು ಹುಲಿಕೆರೆ ಗ್ರಾಮದ ರಸ್ತೆಯಲ್ಲಿ ನಿಂತಿದ್ದ ರೌಡಿಶೀಟರ್ ಸುಧೀರ್ ಎಂಬಾತನನ್ನು, ತನ್ನ ಮತ್ತೊಬ್ಬ ಗೆಳೆಯ ಪೂರ್ಣಚಂದ್ರ ಹಾಗೂ ಇತರ ಗೆಳೆಯರು ಹಿಂಬಾಲಿಸಿಕೊಂಡು ಬಂದು ಕುತ್ತಿಗೆ ಕತ್ತರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ತಲೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆಯನ್ನು ಕಂಡು ಹುಲಿಕೆರೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ವಿಷಯ ತಿಳಿದ ಕೆಆರ್ ಎಸ್ ಪೊಲೀಸ್ ಠಾಣೆಯ ಪೊಲೀಸರು ಶವವನ್ನು ಶವ ಪರೀಕ್ಷೆಗಾಗಿ ಶವಗಾರಕ್ಕೆ ಸ್ಥಳಾಂತರಿಸಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣ ಹಳೆ ದ್ವೇಷ ಎನ್ನಲಾಗುತ್ತಿದ್ದು, ಈ ಕೊಲೆಯ ನಿಖರ ಕಾರಣಕ್ಕಾಗಿ ಪೊಲೀಸರು ಕೊಲೆ ಆರೋಪಿ ಪೂರ್ಣಚಂದ್ರನಿಗಾಗಿ ಬಲೆ ಬೀಸಿದ್ದು ತನಿಖೆ ನಡೆಸುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ