Thursday, November 19, 2026

ಪ್ರಾಯೋಗಿಕ ಆವೃತ್ತಿ

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಭಾರತೀ ಹೆಲ್ತ್ ಲೈನ್ಸ್ ಕಾಲೇಜು ವತಿಯಿಂದ 5 ದಿನಗಳ ಕಾಲ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಡಿಎಚ್ಓ ಧನಂಜಯ್ ಚಾಲನೆ ನೀಡಿದರು.

ಭಾರತೀನಗರದ ಭಾರತೀ ಎಜುಕೇಷನ್ ಟ್ರಸ್ಟ್, ಭಾರತೀ ಹೆಲ್ತ್ಸೈನ್ಸ್ ಕಾಲೇಜು ಮತ್ತು ಡಾ.ಜಿ. ಮಾದೇಗೌಡ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆಸ್ತಿ – ಅಧಿಕಾರಕ್ಕಿಂತ ರೋಗ್ಯವೇ ಅತ್ಯಮೂಲ್ಯ. ಎಲ್ಲವನ್ನೂ ಸಂಪಾದನೆ ಮಾಡಬಹುದು. ಆರೋಗ್ಯವನ್ನು ಖರೀಸಲು ಮಾತ್ರ ಸಾಧ್ಯವಿಲ್ಲ ಎಂದರು.

ಇದೇ ವೇಳೆ ಭಾರತೀ ಹೆಲ್ತ್ಸೈನ್ಸ್ ಕಾಲೇಜಿನ ನಿರ್ದೇಶಕ ಡಾ.ಟಿ.ತಮೀಜ್ಮಣಿ,  ಜಿ.ಮಾದೇಗೌಡ ಹಾಸ್ಪಿಟಲ್ ಆಡಳಿತಾಧಿಕಾರಿ ಪಿ.ಎಸ್.ಗಣೇಶ್ ಪ್ರಭು, ಗ್ರಾ.ಪಂ ಅಧ್ಯಕ್ಷೆ ಕೆ.ಎ.ಶಮೀನಾಭಾನು, ಹೆಲ್ತ್ಸೈನ್ಸ್ ಕಾಲೇಜಿನ ವಿವಿಧ ಅಂಗಸಂಸ್ಥೆಯ ಪ್ರಾಂಶುಪಾಲ ಡಾ.ಬಾಲಸುಭ್ರಮಣ್ಯಂ, ಮಂಜು ಎಂ ಜಾಕೋಬ್, ಕೆ.ಎಂ.ಮಹೇಂದ್ರ, ಮಹೇಶ್ ಕುಮಾರ್, ಜಿ.ಶಾಂತಕುಮಾರ್, ಡಾ.ಎಚ್.ಎ.ಕಲಾಶ್ರೀ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ