ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜುಲೈ 01ರಂದು ಮಂಡ್ಯ ಜಿಲ್ಲಾ ಪ್ರವಾಸ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಕೆ.ಆರ್.ಪೇಟೆಯ ಎಸ್. ಎಂ.ಲಿಂಗಪ್ಪ ಸಹಕಾರ ಭವನದಲ್ಲಿ ಕೃಷ್ಣ ಪ್ರತಿಷ್ಠಾಪನಾ ವತಿಯಿಂದ ನಡೆಯಲಿರುವ ಕೆ.ಆರ್ ಪೇಟೆ ಕೃಷ್ಣ ರವರ 83ನೇ ಹುಟ್ಟುಹಬ್ಬ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ 1ಗಂಟೆಗೆ ಕೆ.ಆರ್ ಪೇಟೆ ತಾಲ್ಲೂಕು ಕಿಕ್ಕೇರಿಯಲ್ಲಿ ಇತ್ತೀಚೆಗೆ ನಿಧನರಾದ ಕರ್ತವ್ಯ ನಿರತ ಯೋಧ ಕೆ ಪಿ ಜನಾರ್ಧನ್ ಗೌಡ ಅವರ ಮನೆಗೆ ಭೇಟಿ ನೀಡುವರು. ಮಧ್ಯಾಹ್ನ 1.15 ಕ್ಕೆ ಕೆ.ಆರ್. ಪೇಟೆ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವರು.
ಮಧ್ಯಾಹ್ನ 2 ಗಂಟೆಗೆ ನಾಗಮಂಗಲ ತಾಲ್ಲೂಕಿನ ಎಂ.ಆರ್.ಪಿ ಕಲ್ಯಾಣ ಮಂಟಪದಲ್ಲಿ ನಾಗಮಂಗಲ ತಾಲ್ಲೂಕಿನ ಎಲ್ಲಾ ಇಲಾಖೆಗಳ ನೌಕರರ ವತಿಯಿಂದ ಕೃಷಿ ಸಚಿವರಿಗೆ ಏರ್ಪಡಿಸಲಾಗಿರುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು. ನಂತರ ಸಂಜೆ 4 ಗಂಟೆಗೆ ನಾಗಮಂಗಲ ರಸ್ತೆಯ ಮೂಲಕ ಬೆಳ್ಳೂರು ಕ್ರಾಸ್ – ಕುಣಿಗಲ್-ನೆಲಮಂಗಲ ಮಾರ್ಗವಾಗಿ ಕೇಂದ್ರ ಸ್ಥಾನ ಬೆಂಗಳೂರಿಗೆ ತಲುಪುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




