ಇಂದಿನಿಂದ “ಗೃಹಜ್ಯೋತಿ” ಯೋಜನೆಯಡಿ ಗರಿಷ್ಠ 200 ಯುನಿಟ್ ವರೆಗೆ ಗೃಹಬಳಕೆಯ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಲೆಯೇರಿಕೆಯೆಂಬ ಕಗ್ಗತ್ತಲು ದೇಶವನ್ನು ಆವರಿಸಿರುವ ಈ ಹೊತ್ತಿನಲ್ಲಿ ನಾಡಿನ ಮನೆಗಳಿಗೆ ಬೆಳಕು ನೀಡುವ ಸದುದ್ದೇಶದ ಕಾರ್ಯಕ್ರಮವಿದು. ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಬಳಸುವ ಮೂಲಕ ಯೋಜನೆಯ ಸದ್ಬಳಕೆ ಮಾಡಿ ಕೊಳ್ಳಬೇಕೆಂದು ನಾಡ ಬಾಂಧವರಲ್ಲಿ ವಿನಂತಿ. ಸಂಕಷ್ಟದ ಕತ್ತಲು ಸರಿಯಲಿ, ಸಂತಸದ ಬೆಳಕು ಬೆಳಗಲಿ ಎಂದು ಅವರು ಟ್ವೀಟ್ ನಲ್ಲಿ ರಾಜ್ಯದ ಜನತೆ ಶುಭ ಆರೈಸಿದ್ದಾರೆ.




