ಕಬ್ಬಿಗೆ ನ್ಯಾಯಯುತ ಬೆಲೆ ನಿಗಧಿಗೊಳಿಸಬೇಕು ಹಾಲಿನ ಬೆಲೆ ಹೆಚ್ಚಳ ಗೊಳಿಸಬೇಕು ಎಂದು ಆಗ್ರಹಿಸಿ ಡಿಸಂಬರ್ 19 ರಂದು ಸೊಮವಾರ ಮದ್ದೂರು ಬಂದ್ ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ
ಮಂಡ್ಯದಲ್ಲಿ ಕಳೆದ ನಲವತ್ತೊಂದು ದಿನಗಳಿಂದಲೂ ರೈತರು ಆಹೋ ರಾತ್ರಿ ದರಣಿ ನಡೆಸುತ್ತಿದ್ದರೂ, ಸರ್ಕಾರ ರೈತರ ಮನವಿಗೆ ನಿರ್ಲಕ್ಷ್ಯ ತೋರಿರುವ ಕ್ರಮ ಖಂಡಿಸಿ ಕೂಡಲೆ ನ್ಯಾಯಯುತ ಬೆಲೆ ನೀಡಬೇಕೆಂದು ಆಗ್ರಹಿಸಿ ಡಿ 19 ರಂದು ಮಂಡ್ಯನಗರ ಬಂದ್ ಗೆ ಕರ್ನಾಟಕ ರಾಜ್ಯ ರೈತಸಂಘ ಕರೆ ನೀಡಿದ್ದು ಈ ಬಂದ್ ಗೆ ಬೆಂಬಲ ನೀಡಲು ಮದ್ದೂರು ಹಾಗೂ ಭಾರತಿನಗರ ಬಂದ್ ಗೆ ಕರೆ ನೀಡಲಾಗಿದೆ ಎಂದು ಮದ್ದೂರಿನ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಮಾರ್ಗದರ್ಶಕ ನ.ಲಿ.ಕೃಷ್ಣ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಈ ಬಂದ್ ಗೆ ಮದ್ದೂರಿನ ವರ್ತಕರ ಸಂಘ, ಜಾಮಿಯಾ ಮಸೀದಿ ಕಮಿಟಿ, ಸವಿತಾ ಸಮಾಜ ಹಾಗೂ ಎಲ್ಲಾ ವರ್ತಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮದ್ದೂರು ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಹಾಲು ಉತ್ಪಾದಕರ ಹೋರಾಟ ಸಮಿತಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ದಲಿತ ಸಂಘಟನೆಗಳು, ಗ್ರಾ ಪಂ ಸದಸ್ಯರ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಸೇರಿ ಹಲವು ಪ್ರಗತಿಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.
ಈ ಬಂದ್ ಸೊಮವಾರ ಬೆಳಿಗ್ಗೆ ಏಳು ಘಂಟೆಯಿಂದ ಮಧ್ಯಾಹ್ನ ಒಂದು ಘಂಟೆ ವರೆಗೆ ನಡೆಯಲಿದೆ.
ಬಂದ್ ವೇಳೆ ಬೈಕ್ ಜಾಥಾ ನಡೆಸಲಿರುವ ಪ್ರಗತಿಪರ ಸಂಘಟನೆಗಳು ಮಧ್ಯಾಹ್ನ ಒಂದು ಘಂಟೆಗೆ ತಹಶೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಕಬ್ಬಿಗೆ ನ್ಯಾಯಯುತ ಬೆಲೆ ನಿಗಧಿಗೊಳಿಸಲು ಹಾಲಿನದರ ಹೆಚ್ಚಳ ಮಾಡಲು ಮತ್ತು ರಾಜ್ಯಾಧ್ಯಾಂತ ಎಕರೂಪದಿ ಬೆಂಬಲ ಬೆಲೆ ನಿಗಧಿಗೊಳಿಸಿ ಭತ್ತ ಖರೀಧಿ ಕೇಂದ್ರದ ಮೂಲಕ ಭತ್ತ ಖರೀದಿಸಲು ಆಗ್ರಹಿಸಿ ಮನವಿ ಪತ್ರ ನೀಡಲಾಗುವುದು




