Friday, November 20, 2026

ಪ್ರಾಯೋಗಿಕ ಆವೃತ್ತಿ

ಬ್ರಾಹ್ಮಣ ಸಮಾಜ ಸ್ವಾಭಿಮಾನದಿಂದ ಉನ್ನತ ಮಟ್ಟಕ್ಕೆ ಬೆಳೆಯಲಿ – ಡಾ.ಅಶೋಕ್ ಹಾರನಹಳ್ಳಿ

ಬ್ರಾಹ್ಮಣ ಸಮಾಜ ಸ್ವಾಭಿಮಾನ ಬುದ್ಧಿಶಕ್ತಿಯಿಂದ ಉನ್ನತ ಮಟ್ಟದಲ್ಲಿ ಬೆಳೆಯುವ ಪ್ರಯತ್ನ ಮಾಡಬೇಕು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಪ್ರಾಚೀನ ಸಂಸ್ಕೃತಿಯಾದ ಸಂಸ್ಕಾರಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಒಂದು ಶಕ್ತಿಯಾಗಿ ಬೆಳೆಯಲು ಕಾರ್ಯಶೀಲರಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ.ಅಶೋಕ್ ಹಾರನಹಳ್ಳಿ ಹೇಳಿದರು.

ಮಂಡ್ಯ ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಮಂಡ್ಯ ಜಿಲ್ಲಾ ವಿಪ್ರ ಬಳಗ ಮತ್ತು ಮಂಡ್ಯ ಜಿಲ್ಲಾ ವಿಪ್ರ ಸಮಾಜದ ವತಿಯಿಂದ  ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಧನ ಸಹಾಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜ ಎಂದು ಆರ್ಥಿಕವಾಗಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದು ಸಮಾಜದಲ್ಲಿ ಮುಂದುವರೆದ ವ್ಯಕ್ತಿಗಳು, ಇತರರಿಗೆ ಸಹಾಯ ಮಾಡಿ ಅವರನ್ನು ಮೇಲೆತ್ತುವ ಕಾರ್ಯವಾಗಬೇಕೆಂದರು.

ಬ್ರಾಹ್ಮಣ ಜನಾಂಗ ಮೂಢನಂಬಿಕೆಗಳಿಗೆ ಮಾರುಹೋಗದೆ, ಸಾಂಪ್ರದಾಯಿಕ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಬೆಳೆಯಬೇಕಾಗಿದೆ, ಸಮಾಜದ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ಬ್ರಾಹ್ಮಣ ಮಹಾಸಭೆ ಅನೇಕ ಕಾರ್ಯ ಯೋಜನೆಗಳನ್ನು ಪ್ರಕಟಿಸಿದ್ದು ಅವುಗಳ ಅವುಗಳ ಸದುಪಯೋಗವನ್ನು ಎಲ್ಲರೂ ಅವಶ್ಯಕವಾಗಿ ಪಡೆಯಬೇಕು ಎಂದರು

ಇದೇ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಿಂದ ವೆಂಕಟೇಶ್ ವರಹ ವಿಠಲದಾಸ, ಪ್ರಕಾಶ್ ಜೋಯಿಸ್, ಕಾಯಕ ಕ್ಷೇತ್ರದಿಂದ ಎಲ್ಐಸಿ ವೆಂಕಟೇಶ್, ಕೃಷಿ ಕ್ಷೇತ್ರದಿಂದ ಕೆ.ಜಿ. ಅನಂತರಾಮ್, ಪತ್ರಿಕಾ ಕ್ಷೇತ್ರದಲ್ಲಿ ಡಿ ಎನ್ ಶ್ರೀಪಾದು, ಗಾಯನ ಕ್ಷೇತ್ರದಿಂದ ಸಿ.ಪಿ .ವಿದ್ಯಾಶಂಕರ್, ಸಮಾಜಸೇವಾ ಕ್ಷೇತ್ರದಿಂದ ಹರೀಶ್ ಹೆಮ್ಮನಹಳ್ಳಿ, ಹೋಟೆಲ್ ಉದ್ಯಮದಿಂದ ಪ್ರೇಮ ಹಂದೆ ಅವರನ್ನು ಅಭಿನಂದಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಬಿ.ಕೆ. ನಟರಾಜ್ ಜೋಯಿಸ್, ಬ್ರಾಹ್ಮಣ ಸಮುದಾಯದವರು ಸ್ವಾಭಿಮಾನದಿಂದ ಬುದ್ದಿ ಕುಶಲತೆಯಿಂದ ಸಮಾಜದ ಎಲ್ಲಾ ಪ್ರಕಾರಗಳಲ್ಲೂ ಮುಂದೆ ಬರಬೇಕಾಗಿದೆ ಎಂದರು.

ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಎಂ .ಎಸ್. ಆತ್ಮಾನಂದ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಆರ್ಥಿಕವಾಗಿ ತೀರ ಸಂಕಷ್ಟಕೀಡಾದ ಹತ್ತಾರು ಸಮುದಾಯದ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಬ್ರಾಹ್ಮಣ ಸಮಾಜ ಮುಖಂಡರಾದ ರವೀಂದ್ರ , ಕಾರ್ತಿಕ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ