Thursday, November 19, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ರಾಷ್ಟ್ರೀಯ ವೈದ್ಯರ ದಿನಾಚರಣೆ ; ಅಭಿನಂದನೆ

ಶ್ರೀರಂಗಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾರತ ರತ್ನ ಡಾ. ಬಿ.ಸಿ.ರಾಯ್ ಜನ್ಮ ದಿನದ ಪ್ರಯುಕ್ತ ‘ರಾಷ್ಟ್ರೀಯ ವೈದ್ಯ ರ ದಿನಾಚರಣೆ’ ಯ ಅಂಗವಾಗಿ ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವೆಂಕಟೇಶ್ ಹಾಗೂ ಪತ್ರಿಕಾ ದಿನಾಚರಣೆ ಪ್ರಯುಕ್ತ ಶ್ರೀರಂಗಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಜಾ ಮಂಜು ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ ಮಾತನಾಡಿ, ಡಾ. ಬಿ ಸಿ ರಾವ್ ರವರ ವೈದ್ಯಕೀಯ ಅನುಪಮ ಸೇವೆಯನ್ನು ಪರಿಗಣಿಸಿ “ಭಾರತರತ್ನ” ಅತ್ಯುನ್ನತ ಪ್ರಶಸ್ತಿ ನೀಡಿ, ಅವರ ಜನ್ಮದಿನವನ್ನು”ರಾಷ್ಟ್ರೀಯ ವೈದ್ಯರ ದಿನ”ವನ್ನಾಗಿ ಆಚರಿಸಲಾಗುತ್ತಿದೆ. ಡಾ. ಬಿ ಸಿ ರಾಯ್ ಅವರು ವ್ಯೆದ್ಯರಲ್ಲದೆ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಗಳಾಗಿ ಜನಪರ ಆಡಳಿತ ನಡೆಸಿದರು. ಆಧುನಿಕ ಪಶ್ಚಿಮ ಬಂಗಾಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದರು ಎಂದರು.

ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾಲೂಕು ಕ.ಸಾ ಪ. ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ, ಕಾರ್ಯದರ್ಶಿ ಗೌಡಳ್ಳಿ ದೇವರಾಜು, ಹೋಬಳಿ ಅಧ್ಯಕ್ಷರಾದ ಚಂದಗಾಲು ಶಂಕರ್, ಲೋಕೇಶ್ ದರಸಗುಪ್ಪೆ, ಪದಾಧಿಕಾರಿಗಳಾದ ಗಂಜಾಂ ಪ್ರಭಾಕರ್, ಮಹೇಶ್, ವಿಶ್ವನಾಥ್ ಸೋಮವಾರಪೇಟೆ, ನೆಲಮನೆ ನಾಗೇಂದ್ರ, ಚಂದ್ರಶೇಖರ ಹಾಗೂ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ