Thursday, November 19, 2026

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ಹೆದ್ದಾರಿ | ಗಣಂಗೂರು ಬಳಿ ಟೋಲ್ ಸಂಗ್ರಹ ನಿಲ್ಲಿಸಲು ಆಗ್ರಹ

ಬೆಂಗಳೂರು-ಮೈಸೂರು ಹೆದ್ದಾರಿಯ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಣಂಗೂರು ಬಳಿ ಇಂದಿನಿಂದ ಟೋಲ್ ಸಂಗ್ರಹಗೊಳಿಸುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕರುನಾಡ ಸೇವಕರು ಸಂಘಟನೆ ಆಗ್ರಹಿಸಿದೆ.

ರಾಷ್ಟೀಯ ಹೆದ್ದಾರಿ 275 ನಿರ್ಮಿಸುವಂತೆ ಈ ಭಾಗದ ಜನರು ಯಾವ ಮನವಿಯನ್ನು ಮಾಡದಿದ್ದರೂ ಕೇವಲ ಟೋಲ್ ಉದ್ದೇಶಕ್ಕಾಗಿ ಈ ರಸ್ತೆ ನಿರ್ಮಿಸಿ ಉಳ್ಳವರಿಗೆ ಮಾತ್ರ ರಸ್ತೆ ಎಂಬ ನೀತಿಯನ್ನು ಪ್ರತಿಪಾದಿಸಿ ಜನಸಾಮಾನ್ಯರನ್ನು ಹೆದ್ದಾರಿ ಬಳಕೆಯಿಂದ ಹೊರಗುಳಿಸಲಾಗಿದೆ, ಈ ರಸ್ತೆಯ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಈ ಹಿಂದೆ ತನ್ನದೆ ಹಣದಲ್ಲಿ ಭೂಮಿ ಸ್ವಾಧೀನ ಮಾಡಿಕೊಟ್ಟಿದೆ. ಆದಾಗಿಯೂ ಹೆದ್ದಾರಿಯ ಮೇಲೆ ಮತ್ತು ಟೋಲ್ ನಿಗದಿಯಲ್ಲಿ ರಾಜ್ಯ ಸರಕಾರಕ್ಕೆ ಯಾವುದೆ ಹಕ್ಕು ಇಲ್ಲವಾಗಿರುವುದು ಒಕ್ಕೂಟದ ತತ್ವಗಳಿಗೆ ವಿರುದ್ದವಾದುದು ಎಂದುಎಂದು ಸಂಘಟನೆಯ ಅಧ್ಯಕ್ಷ ನಾಗಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ನಿರ್ಮಾಣದ ಹೆಸರಿನಲ್ಲಿ ಈ ಭಾಗದ ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾಗಿದೆ. ಹಳ್ಳಿಗಳು ದ್ವೀಪಗಳಾಂತಾಗಿದೆ, ಅವುಗಳ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದೆ. ಹೆದ್ದಾರಿಯುದ್ದಕ್ಕು ಇದ್ದ ವಹಿವಾಟು ಸಂಪೂರ್ಣ ನೆಲಕಚ್ಚಿ ಭೂಮಿಯ ಮೌಲ್ಯ ಇಳಿಮುಖವಾಗಿದೆ. ಈ ಭಾಗದ ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಇದಲ್ಲದೆ ಕೇಂದ್ರ ಒಕ್ಕೂಟ ಸರಕಾರ ರಾಜ್ಯದಿಂದ ನೇರ ತೆರಿಗೆ ಹಾಗೂ ಜಿಎಸ್ ಟಿ ಮೂಲಕ ವಾರ್ಷಿಕ ನಾಲ್ಕು ಲಕ್ಷಕೋಟಿ ಹಣವನ್ನು ರಾಜ್ಯದಿಂದ ಹೊತ್ತೊಯ್ಯುತ್ತಿದೆ. ಹೀಗಿರುವಾಗ ಕನ್ನಡಿಗರು ಈ ರಸ್ತೆಯನ್ನು ಟೋಲ್ ಕಟ್ಟಿ ಬಳಸಬೇಕೆಂಬುದು ಒಕ್ಕೂಟ ಸರಕಾರ ಕನ್ನಡಿಗರನ್ನು ಲೂಟಿ ಮಾಡುವ ಒಂದು ಕ್ರಮವೇ ಆಗಿದೆ ಎಂದು ಕಿಡಿಕಾರಿದರು.

ಅಲ್ಲದೆ ಹೆದ್ದಾರಿಯುದ್ದಕ್ಕೂ ಸರ್ವಿಸ್ ರಸ್ತೆಗಳು ಸಂಪೂರ್ಣಗೊಂಡಿಲ್ಲ. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಸಾಲುಸಾಲು ಅಪಘಾತಗಳು ನಡೆಯುತ್ತಿವೆ, ಈ ಎಲ್ಲ ಕಾರಣದಿಂದ ಟೋಲ್ ಸಂಗ್ರಹವನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಮೂರು ಪಥದ ಸರ್ವಿಸ್ ರಸ್ತೆ ನಿರ್ಮಿಸಲು ಆಗ್ರಹ

ಹೆದ್ದಾರಿಯ ಎರಡು ಬದಿಯಲ್ಲಿ ಮೂರು ಪಥದ ಸರ್ವಿಸ್ ರಸ್ತೆ ನಿರ್ಮಿಸಬೇಕು, ಅದು ಟೋಲ್ ರಸ್ತೆಯ ಗುಣಮಟ್ಟದಲ್ಲಿ ನಿರ್ಮಿಸಿ ನಿರ್ವಹಿಸಬೇಕು.  ರಸ್ತೆ ನಿರ್ವಹಣೆಯಲ್ಲಿ ಶೇ100 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. ತಕ್ಷಣದಿಂದ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.

ಕನ್ನಡಿಗರ ನೇಮಕಕ್ಕೆ ಆಗ್ರಹ

ಕರುನಾಡ ಸೇವಕರು ಸಂಘಟನೆ ವತಿಯಿಂದ ಗಣಂಗೂರು ಟೋಲ್ ಬಳಿ ಟೋಲ್ ತಡೆದು ಧರಣಿ ನಡೆಸಲಾಯಿತು. ಟೋಲ್ ಸಂಗ್ರಹದ ಗುತ್ತಿಗೆ ಪಡೆದಿರುವ ಏಜೆನ್ಸಿ ಮಾಲೀಕ ಸಾತ್ವಿಕ್ ಒಂದು ವಾರದೊಳಗೆ ಅಗತ್ಯವಿರುವ ಎಲ್ಲ ಹುದ್ದೆಗಳಿಗೆ ಸ್ಥಳೀಯ ಕನ್ನಡಿಗರನ್ನು ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಘಟನೆ ಮುಖಂಡರು ಸಭೆ ನಡೆಸಿ ಸಂದರ್ಭದಲ್ಲಿ ಸರ್ವಿಸ್ ರೋಡ್ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜುಲೈ ಹತ್ತರೊಳಗೆ ಸಭೆ ನಡೆಸುವಂತೆ ತಾಕೀತು ಮಾಡಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಕರುನಾಡು ಸೇವಕರು ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ವಹಿಸಿದ್ದರು. ಪ್ರತಿಭಟನೆಯಲ್ಲಿ ಮಂಡ್ಯ ನಗರಾಧ್ಯಕ್ಷ ಚಂದ್ರು, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ, ಕರುನಾಡ ಸೇವಕರು ಸಂಘದ ಕೆಂಪರಾಜು, ಮಂಜುನಾಥ್, ತಿಮ್ಮೇಗೌಡ, ಮನು, ಬೂದನೂರು ಶಿವಣ್ಣ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ