ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರತನಾಗಿದ್ದ ಯೋಧ ಕೆ.ಪಿ.ಜನಾರ್ಧನ್ ಗೌಡ (30) ಕರ್ತವ್ಯ ನಿರತನಾಗಿದ್ದಾಗಲೇ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ಯೋಧನ ಮನೆಗೆ ತೆರಳಿದ ಮಾಜಿ ಸಚಿವ ಡಾ.ನಾರಾಯಣಗೌಡ ಅವರು ತೆರಳಿ, ಮೃತ ಯೋಧನ ತಂದೆ, ತಾಯಿ ಹಾಗೂ ಪತ್ನಿ ರಂಜಿತಾ ಅವರಿಗೆ ಸಾಂತ್ವನ ಹೇಳಿ, ಧನಸಹಾಯ ಮಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಕೇಂದ್ರ ರಕ್ಷಣಾ ಸಚಿವರೊಂದಿಗೆ ಚರ್ಚೆ ನಡೆಸಿ ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಯೊಂದರಲ್ಲಿ ಸೂಕ್ತ ಉದ್ಯೋಗವನ್ನು ದೊರಕಿಸಿಕೊಡುವ ಭರವಸೆಯನ್ನು ನೀಡಿದರು.
ಮೃತ ಯೋಧ ಜನಾರ್ಧನ ಗೌಡ ಅವರ ಪತ್ನಿ ರಂಜಿತ ಪದವಿ ವ್ಯಾಸಂಗವನ್ನು ಮಾಡಿದ್ದು, ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಕೇಂದ್ರ ಸರ್ಕಾರದ ವತಿಯಿಂದ ಸೂಕ್ತ ಉದ್ಯೋಗವನ್ನು ದೊರಕಿಸಿಕೊಡುವ ಡಲು ಮಾಜಿ ಸಚಿವ ನಾರಾಯಣಗೌಡ ಮೃತ ಯೋಧನ ಕುಟುಂಬ ವರ್ಗದವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಕೆಎಸ್ ಪ್ರಭಾಕರ್, ಶೀಳನೆರೆ ಅಂಬರೀಶ್, ಮಂಡ್ಯ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಕೆ ಜಿ ತಮ್ಮಣ್ಣ, ಪುರಸಭಾ ಮಾಜಿ ಸದಸ್ಯ ಕೆ.ಆರ್ ನೀಲಕಂಠ, ತಾ.ಪಂ. ಮಾಜಿ ಅಧ್ಯಕ್ಷ ಬೂಕನಕೆರೆ ಜವರಾಯಿಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷ ವಡ್ಡರಹಳ್ಳಿ ರವಿ, ಮುಖಂಡರಾದ ಮಾದಾಪುರ ಶೇಖರ್, ರಾಜು, ಶೆಟ್ಟಿಹಳ್ಳಿ ಕೃಷ್ಣೇಗೌಡ, ಕಿಕ್ಕೇರಿ ಬಲರಾಮ್, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.




