Sunday, March 3, 2024

ಪ್ರಾಯೋಗಿಕ ಆವೃತ್ತಿ

ರೋಗಿಯ ಜೀವ ಉಳಿಸುವ ವೈದ್ಯರು ಬದುಕಿನ ಭರವಸೆ – ಹನುಮಂತಯ್ಯ

ರೋಗಿಯ ಜೀವ ಉಳಿಸುವ ಕರ್ತವ್ಯದೊಂದಿಗೆ ವೈದ್ಯರು ಬದುಕಿನ ಭರವಸೆಯಾಗಿದ್ದಾರೆ ಎಂದು ನಾಲ್ವಡಿ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಹನುಮಂತಯ್ಯ ಹೇಳಿದರು.

ಮಂಡ್ಯ ನಗರದ ವಿದ್ಯಾನಗರದಲ್ಲಿರುವ ಕರುನಾಡ ಕೇಬಲ್ ಲಿಂಕ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ  ಲಯನ್ಸ್ ಒಕ್ಕೂಟ ಜಿಲ್ಲೆ 317ಜಿ ನಾಲ್ವಡಿ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಮತ್ತು ಎಲೆಮರೆಕಾಯಿಯಂತೆ ರೋಗಿಗಳ ಸೇವೆ, ಆರೋಗ್ಯ, ಸಮಾಜದ ಸ್ವಾಸ್ಥ್ಯ ಸುಧಾರಣೆ ಮಾಡಿವ ವೈದ್ಯರನ್ನು ಸಮಾಜ ಸ್ಮರಿಸಿಕೊಳ್ಳುತ್ತದೆ, ಇಂತಹ ಸೇವಾನಿರತ ವೈದ್ಯರನ್ನು ಗೌರವಿಸಿ, ಬದುಕು ನೀಡಿದವರನ್ನು ಆರಾಧಿಸುವ ದಿನವಾಗಿದೆ ಎಂದು ನುಡಿದರು.

ಅಭಿನಂದನೆ ಸ್ವೀಕರಿಸಿದ ವೈದ್ಯ ಡಾ. ಎಂ. ಮಾದೇಶ್ ಮಾತನಾಡಿ, ವೈದ್ಯರ ದಿನಾಚರಣೆಯಲ್ಲಿ ನಮ್ಮನ್ನು ಗೌರವಿಸಿರುವುದು ನಮ್ಮ ಜವಬ್ದಾರಿಯನ್ನು ಹೆಚ್ಚಿಸಿದೆ, ಮತ್ತಷ್ಟು ಸಮಾಜಮುಖಿಯಾಗಿ ದುಡಿಯಲು, ರೋಗಿಗಳ ಆರೋಗ್ಯ ರಕ್ಷಣೆ ಸುಧಾರಿಸಲು ಪ್ರೇರಣೆಯಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನಾಲ್ವಡಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಶಿವಲಿಂಗಯ್ಯ, ಪ್ರಾಂತೀಯ ಅಧ್ಯಕ್ಷ ಎಂ.ಆರ್.ಮಂಜು, ವಲಯ ಅಧ್ಯಕ್ಷ ಧನಂಜಯ ದಸರಗುಪ್ಪೆ, ಅಧ್ಯಕ್ಷರಾದ ಚಂದ್ರಲಿಂಗು, ಸುಭಾಸ್, ಲಿಂಗೇಗೌಡ, ಶಿವಣ್ಣ, ಕಾರ್ಯದರ್ಶಿ ಶಿವಲಿಂಗೇಗೌಡ, ಖಜಾಂಚಿ ಜಯಕುಮಾರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!