Tuesday, November 24, 2026

ಪ್ರಾಯೋಗಿಕ ಆವೃತ್ತಿ

ಭಾರತೀನಗರ | ಜಾನಪದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ

ಮದ್ದೂರು ತಾಲ್ಲೂಕಿನ ಭಾರತೀನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಅವರು ಚಾಲನೆ ನೀಡಿದರು.

ಅಣ್ಣೂರು ವಿಶ್ವಪ್ರಿಯ ಸಾಂಸ್ಕೃತಿಕ ಕಲಾಟ್ರಸ್ಟ್ ಇವರ ಸಹಯೋಗದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಹಲವಾರು ಜಾನಪದ ಕಲಾವಿದರು ಭಾಗವಹಿಸಿ ಜಾನಪದ ಸಾಹಿತ್ಯವನ್ನು ಉಣಬಡಿಸಿದರು.

ಈ ಸಂದರ್ಭದಲ್ಲಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪಾರ್ಷನೆ ಸಲ್ಲಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಜಾನಪದತ್ಯವನ್ನು ಮೈಗೂಡಿಸಿಕೊಂಡಂತಹವರು ಇಂದು ವಿದೇಶಗಳಲ್ಲೂ ಕೂಡ ತಮ್ಮ ಪ್ರತಿಭೆಯನ್ನು ಪ್ರದಶರ್ಿಸಿದ್ದಾರೆ. ಹಾಗಾಗಿ ನಶಿಸುತ್ತಿರುವ ಜಾನಪದ ಸಾಹಿತ್ಯ ಕಲೆಗಳಿಗೆ ಕಲಾವಿದರು ಯುವ ಪೀಳಿಗೆಗೆ ಅಭ್ಯಾಸ ಮಾಡಿಸುವ ಮೂಲಕ ಜೀವತುಂಬಬೇಕೆಂದು ಕರೆ ನೀಡಿದರು.

ಅಣ್ಣೂರು, ಬೊಪ್ಪಸಮುದ್ರ, ಕರಡಕೆರೆ, ಶೆಟ್ಟಹಳ್ಳಿ, ತಳಗವಾದಿ ಸೇರಿದಂತೆ ಇನ್ನಿತರೆ ಗ್ರಾಮದ ಜಾನಪದ ಕಲಾವಿದರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕಲಾವಿದರಿಗೆ ಆಯೋಜಿಸಲಾಗಿದ್ದ ಜಾನಪದ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಇದೇ ವೇಳೆ ವಿಶ್ವಪ್ರಿಯ ಸಾಂಸ್ಕೃತಿಕ ಕಲಾಟ್ರಸ್ಟ್ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ, ಡಿಎಸ್ಎಸ್ ಜಿಲ್ಲಾಸಂಚಾಲಕ ಅಣ್ಣೂರು ರಾಜಣ್ಣ, ಸುಧಾಮೂರ್ತಿ, ನಗರ ಮತ್ತು ಗ್ರಾಮೀಣಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಕರಡಕೆರೆ ವಸಂತ, ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ತೊರೆಬೊಮ್ಮನಹಳ್ಳಿ ಮಹದೇವಿ, ಪರಿಸರ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಅಣ್ಣೂರು ಸತೀಶ್, ಸಾಮಾಜಿಕ ಕಾರ್ಯಕರ್ತ ಅಣ್ಣೂರು ಜಗದೀಶ್, ಕರಡಕೆರೆ ಯೋಗೇಶ್, ಅಂಬರಹಳ್ಳಿ ಸ್ವಾಮಿ, ಮುಡೀನಹಳ್ಳಿ ತಿಮ್ಮಯ್ಯ, ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ