Friday, November 20, 2026

ಪ್ರಾಯೋಗಿಕ ಆವೃತ್ತಿ

ಜನ ಪ್ರತಿನಿಧಿಗಳೊಂದಿಗೆ ಟೋಲ್ ಸಿಬ್ಬಂದಿ ಅನುಚಿತ ವರ್ತನೆ ಗಂಭೀರವಾಗಿ ಪರಿಗಣಿಸಿದ್ದೇವೆ ; ಸಚಿವ ಸತೀಶ್ ಜಾರಕಿಹೊಳಿ

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಚುನಾಯಿತ ಪ್ರತಿನಿಧಿಗಳು ಹಾಗೂ ರಸ್ತೆ ಬಳಕೆದಾರರೊಂದಿಗೆ ಟೋಲ್ ಫ್ಲಾಜಾ ಸಿಬ್ಬಂದಿ ಅನುಚಿತವಾಗಿ ವರ್ತಿಸುವ ಎಲ್ಲಾ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಬುಧವಾರ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ರಸ್ತೆ ಬಳಕೆದಾರರೊಂದಿಗೆ ಸಭ್ಯ ಮತ್ತು ಘನತೆಯಿಂದ ವರ್ತಿಸುವಂತೆ ಟೋಲಿಂಗ್ ಏಜೆನ್ಸಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

nudikarnataka.com

ಇದಲ್ಲದೆ, ಇಂತಹ ಅಹಿತಕರ ಘಟನೆಯ ನಂತರ ಸಂಬಂಧಪಟ್ಟ ಸಿಬ್ಬಂದಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಮತ್ತು ಟೋಲಿಂಗ್ ಏಜೆನ್ಸಿಯನ್ನು ಬದಲಾಯಿಸಲಾಗಿದೆ. ಹೊಸ ಟೋಲ್ ಕಲೆಕ್ಷನ್ ಏಜೆನ್ಸಿಗೆ ಟೋಲ್ ಫ್ಲಾಜಾ ಸಿಬ್ಬಂದಿಗೆ ರಸ್ತೆ ಬಳಕೆದಾರರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಸಂವೇದನಾಶೀಲರಾಗಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಹೆಚ್ಚುವರಿ ಕಾಮಗಾರಿ
ಸ್ಥಳೀಯ ಸಾರ್ವಜನಿಕ ಬೇಡಿಕೆಯಂತೆ ಎನ್.ಎಚ್.-275 ಪ್ಯಾಕೇಜ್-2ರ ನಿಟ್ಟಘಟ್ಟದಿಂದ ಮೈಸೂರು ಭಾಗಕ್ಕೆ ಕಾಮಗಾರಿಯ ಬದಲಾವಣೆಯ ಅಡಿಯಲ್ಲಿ ಎನ್.ಎಚ್.ಎ.ಐ. ಅನುಮೋದಿಸಿರುವ ಹೆಚ್ಚುವರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಿಳಿಸಿರುತ್ತಾರೆ ಎಂದಿದ್ದಾರೆ.

ಅಪಘಾತ ಕಾರಣಗಳೇನು:
ಲೇನ್ ಶಿಸ್ತಿನ ಕೊರತೆ ಮತ್ತು ನಿಗದಿತ ವೇಗದ ಮಿತಿ 100 kmph ಮೀರುವ ವಾಹನಗಳು. ನಿಧಾನವಾಗಿ ಚಲಿಸುವ ವಾಹನಗಳು (2 ಚಕ್ರ / 3 ಚಕ್ರ ) ಮತ್ತು ಹೆಚ್ಚಿನ ವೇಗದ ಸಂಚಾರದ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಮುಖ್ಯ ರಸ್ತೆಯಲ್ಲಿ 2 ಚಕ್ರ ಮತ್ತು 3 ಚಕ್ರ ವಾಹನಗಳನ್ನು ನಿಷೇಧಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಮತ್ತು ಅನುಮೋದನೆಗಾಗಿ ಪ್ರಕ್ರಿಯೆಯಲ್ಲಿದೆ. ಅಲ್ಲದೆ, ಹೆದ್ದಾರಿಯಲ್ಲಿ ಅನುಸರಿಸಬೇಕಾದ ಇತರ ಸಂಚಾರ ನಿಯಮಗಳ ಬಗ್ಗೆ ತಿಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಿಗ್ನೇಚಸ್ ಮತ್ತು ಬೋರ್ಡ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ ಎಂದಿದ್ದಾರೆ.

ಬೆಂಗಳೂರು – ಮೈಸೂರು ಹೆದ್ದಾರಿ ಅಪಘಾತಗಳಲ್ಲಿ ಮೃತಪಟ್ಟವರು 123 ಮಂದಿ

ಪ್ಯಾಕೇಜ್-1 ಅಂದರೆ ಬೆಂಗಳೂರು- ನಿಡಘಟ್ಟ ನಡುವೆ ಒಟ್ಟು 245 ಅಪಘಾತಗಳು ಸಂಭವಿಸಿವೆ, 281 ಮಂದಿ  ಗಂಭೀರ ಗಾಯಗೊಂಡು, 57 ಮಂದಿ ಮೃತಪಟ್ಟಿದ್ದಾರೆ.

ಪ್ಯಾಕೇಜ್-2 ಅಂದರೆ ನಿಡಘಟ್ಟ-ಮೈಸೂರು ನಡುವಿನ ಹೆದ್ದಾರಿಯಲ್ಲಿ ಒಟ್ಟು 267 ಅಪಘಾತಗಳು ನಡೆದಿವೆ, 304 ಮಂದಿ ಗಂಭೀರ ಗಾಯಗೊಂಡು, 66 ಮಂದಿ ಮೃತಪಟ್ಟಿದ್ದಾರೆ.

ಹೆದ್ದಾರಿಯಲ್ಲಿ ಒಟ್ಟು 512 ಅಪಘಾತಗಳು ಜರುಗಿದ್ದು, 585 ಮಂದಿ ಗಂಭೀರ ಗಾಯಗೊಂಡಿದ್ದು, ಒಟ್ಟು 123 ಮಂದಿ ಮೃತಪಟ್ಟಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ