Sunday, November 22, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಡಾ.ಅಜಿತ್ ಅಧಿಕಾರ ಸ್ವೀಕಾರ

ಕೆ.ಆರ್.ಪೇಟೆ ತಾಲ್ಲೂಕಿನ ನೂತನ ಆರೋಗ್ಯಾಧಿಕಾರಿಯಾಗಿ ಡಾ.ಅಜಿತ್ ಅವರು ನೇಮಕಗೊಂಡಿದ್ದು, ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು.
ಈ ಹಿಂದಿನ ಪ್ರಭಾರಿ ಆರೋಗ್ಯಾಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಡಾ.ಮಧುಸೂದನ್ ಅವರಿಂದ ಅಧಿಕಾರ ಸ್ವೀಕಾರ ಮಾಡಿದ ಡಾ.ಅಜಿತ್ ಅವರು, ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆಯ ಸೇವೆಯು ಜನಸಾಮಾನ್ಯರಿಗೆ ಸಮರ್ಪಕವಾಗಿ ದೊರೆಯುವಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದ್ದೇನೆ. ಇದಕ್ಕೆ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಾವು ಈ ಹಿಂದೆ ಚನ್ನಪಟ್ಟಣ, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಮತ್ತೊಮ್ಮೆ ತಾಲ್ಲೂಕು ಮಟ್ಟದ ಅಧಿಕಾರಿಯಾಗಿ ಸಕ್ಕರೆ  ಜಿಲ್ಲೆಯ ಅಕ್ಕರೆ  ಜನರ ಸೇವೆ ಮಾಡುವುದು ನಮಗೆ ಯಾವಾಗಲೂ ಖುಷಿ ತರುವ ವಿಚಾರವೇ ಆಗಿದೆ.  ಏಕೆಂದರೆ ಅಧಿಕಾರ ಸ್ವೀಕರಿಸುವ ಮೊದಲ ದಿನವೇ ಸಾಕಷ್ಟು ಮಂದಿ ಅಭಿನಂದಿಸಿರುವುದೇ ಇದಕ್ಕೆ  ಸಾಕ್ಷಿಯಾಗಿದೆ ಎಂದರು.
ತಾಲ್ಲೂಕಿನಾದ್ಯಂತ ಇರುವ ಆರೋಗ್ಯ ಸಿಬ್ಬಂದಿ ವರ್ಗದವರು ತಮ್ಮ ಜವಾಬ್ದಾರಿ ಅರಿತು ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಿಕೊಡಲು ದಿನನಿತ್ಯವೂ  ಶ್ರಮಿಸಬೇಕು. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ತಾಲ್ಲೂಕು ಅಧಿಕಾರಿಯಾಗಿ ತಮ್ಮ ಜೊತೆ ಇದ್ದು ನನ್ನ ಶಕ್ತಿ ಮೀರಿ ತಮ್ಮ ಜೊತೆಗೆ ತಾಲ್ಲೂಕಿನ ಜನರ ಆರೋಗ್ಯ ರಕ್ಷಣೆಗೆ ಶ್ರಮಿಸುವುದಾಗಿ ನೂತನ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಜಿತ್ ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕೆ.ಎಸ್.ಕುಮಾರ್, ಸಿ.ಬಿ.ಚೇತನ್ ಕುಮಾರ್, ಮುಖಂಡರಾದ ಬೂಕನಕೆರೆ ಲೋಹಿತ್, ಗುಡ್ಡೇನಹಳ್ಳಿ ತೇಜಸ್ವಿ, ಅರೆಬೊಪ್ಪನಹಳ್ಳಿ ಗಿರೀಶ್, ಪ್ರವೀಣ್, ಕಿಕ್ಕೇರಿ ಭಾನು, ನಿರ್ಗಮಿತ ಆರೋಗ್ಯಾಧಿಕಾರಿ ಡಾ.ಮಧುಸೂದನ್ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ