Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೊಳಲು ಗ್ರಾ.ಪಂ ಅಧ್ಯಕ್ಷರಾಗಿ ಅರ್ಪಿತ ಆಯ್ಕೆ

ಮಂಡ್ಯ ತಾಲೂಕಿನ ಹೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಕೆ.ಅರ್ಪಿತ ಹಾಗೂ ಉಪಾಧ್ಯಕ್ಷರಾಗಿ ಎಚ್.ಕೆ. ಜಯಪ್ರಕಾಶ್ (ಗೋಪಿ) ಆಯ್ಕೆಯಾಗಿದ್ದಾರೆ.

ಒಟ್ಟು 13 ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದ ಎಚ್.ಎಲ್.ಅಭಿನಂದನ್ ಹಾಗೂ ಉಪಾಧ್ಯಕ್ಷರಾಗಿದ್ದ ಎಚ್.ಡಿ.ಪಲ್ಲವಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಎಂ.ಕೆ ಅರ್ಪಿತ ಹಾಗೂ ರಮ್ಯ ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಕೆ. ಜಯಪ್ರಕಾಶ್ ಮತ್ತು ಎಚ್.ಎಂ.ನಾರಾಯಣ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಎಂ.ಕೆ. ಅರ್ಪಿತ ಅವರಿಗೆ 9 ಮತಗಳು ಹಾಗೂ ಎಚ್.ಕೆ. ಜಯಪ್ರಕಾಶ್ ಅವರಿಗೆ 7 ಮತಗಳಿಂದ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಯೋಜನಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಆರ್. ಶ್ರೀನಿವಾಸ್ ಘೋಷಿಸಿದರು.

ನೂತನ ಅಧ್ಯಕ್ಷೆ ಎಂ.ಕೆ. ಅರ್ಪಿತ ಮಾತನಾಡಿ, ಹೊಳಲು ಗ್ರಾಮವನ್ನು ಸುಂದರ ಮಾದರಿ ಗ್ರಾಮವನ್ನಾಗಿ ಮಾಡಲು ಶ್ರಮಿಸುತ್ತೇನೆ. ಒಳಚರಂಡಿ, ಬೀದಿ ದೀಪಗಳು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಗ್ರಾಮದ ಮುಖಂಡರ ಜೊತೆಗೂಡಿ ಪ್ರಾಮಾಣಿಕವಾಗಿ ಕಾರ‌್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ಎಚ್.ಕೆ. ಜಯಪ್ರಕಾಶ್ (ಗೋಪಿ) ಮಾತನಾಡಿ, ಗ್ರಾಮದ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ತಿಳಿಸಿದರು.

ಇದೇ ವೇಳೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಚ್.ಡಿ. ರವಿ, ಎಚ್. ಎಲ್. ಅಭಿನಂದನ್, ಮಾಜಿ ಉಪಾಧ್ಯಕ್ಷರಾದ ಎಚ್.ಡಿ. ಪಲ್ಲವಿ ಹಾಗೂ ಸದಸ್ಯರನ್ನೊಳಗೊಂಡಂತೆ ಗ್ರಾಮದ ಮುಖಂಡರಾದ ಎಚ್.ಸಿ. ನಾರಾಯಣ, ಎಚ್.ಪಿ. ಶಿವಣ್ಣ, ಎಚ್.ಎಸ್. ಯೋಗೇಶ್‌ಕುಮಾರ್, ಎಚ್.ಬಿ. ಸಚ್ಚಿದಾನಂದ, ಎಚ್.ಎಸ್. ನಂದೀಶ್, ಎಚ್.ಸಿ. ಶ್ರೀಧರ್, ಶಂಕರಪೂಜಾರಿ, ಶಿವಲಿಂಗ, ಡೈರಿ ಅಧ್ಯಕ್ಷ ಎಚ್.ಎನ್. ಉಮೇಶ್, ಗ್ರಾಮದ ಯುವ ಮುಖಂಡ ಎಚ್ಎಸ್ ಆನಂದ್, ಪಿಡಿಓ ಪ್ರಸನ್ನ, ಕಾರ‌್ಯದರ್ಶಿ ಪ್ರಕಾಶ್ ಗ್ರಾಮದ ಹಿರಿಯರು ನೂತನ ಅಧ್ಯಕ್ಷೆ-ಉಪಾಧ್ಯಕ್ಷರನ್ನು ಅಭಿನಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ