ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ವಿಶೇಷ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮಂಜ ಆಲಿಯಾಸ್ ಮಂಜುನಾಥ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಘಟನೆಯ ವಿವರ
ಕೆ.ಆರ್.ಪೇಟೆ ತಾಲ್ಲೂಕಿ ಸಂತೆಬಾಚನಹಳ್ಳಿ ಹೋಬಳಿ ಕೈಗೋನಹಳ್ಳಿ ಗ್ರಾಮದ ಕೆ.ಆರ್.ಪೇಟೆ – ಕೈಗೊಂನಹಟ್ಟಿ ಮುಖ್ಯ ರಸ್ತೆಯಲ್ಲಿ 17 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತ ಬಾಲಕಿ, ತನ್ನ ಅಣ್ಣ ಊರಾದ ವಳಗೆರೆಮೆಣಸ ಗ್ರಾಮಕ್ಕೆ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ಹಾದಿಯಲ್ಲಿ ಬೈಕಿನಲ್ಲಿ ಬಂದ ಮಂಜ, ಬೈಕನ್ನು ನಿಲ್ಲಿಸಿ, ಅಪ್ರಾಪ್ತ ಬಾಲಕಿಯನ್ನು ಎಲ್ಲಗೆ ಹೋಗುತ್ತಿದ್ದೀಯಾ ಎಂದು ಕೇಳಲಾಗಿ, ಆಕೆಯೂ ತನ್ನ ಅಜ್ಜಿ ಊರಾದ ವಳಗೆರೆಮೆಣಸ ಗ್ರಾಮಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾಳೆ. ಆಗ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬೈಕಿಗೆ ಹತ್ತಿಸಿಕೊಂಡು ಮೇಲುಕೋಟೆ ರಸ್ತೆಯಲ್ಲಿನ ವಸಂತಮರ ಫಾರೆಸ್ಟ್ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರವೆಸಗಿ, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ.
ಈ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ A 300, 504, 506, 376 Rev. 34 IPC Col. 6 POCSO Act 2012 ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶಯ್ಯ ಹೆಚ್.ಬಿ ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣ ನ್ಯಾಯಾಧೀಶರಾದ ನಾಗಜ್ಯೋತಿ.ಕೆ.ಎ. ಅವರ ಮುಂದೆ ವಿಚಾರಣೆಗೆ ನಡೆದು, ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 50,000- ರೂ.ಗಳ ದಂಡ ವಿಧಿ ತೀರ್ಪು ನೀಡಿದ್ದಾರೆ.
ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದರು.




