Friday, November 20, 2026

ಪ್ರಾಯೋಗಿಕ ಆವೃತ್ತಿ

ವಿಶ್ವದ ಅತ್ಯುತ್ತಮ ತಿನಿಸುಗಳಲ್ಲಿ ಸ್ಥಾನ ಪಡೆದ ಮೈಸೂರು ಪಾಕ್ ; ಬಾಲ್ಯ ಮೆಲಕು ಹಾಕಿದ ಡಿ.ಕೆ.ಶಿವಕುಮಾರ್

ಎಲ್ಲರ ಬಾಯಲ್ಲೂ ನೀರೂರಿಸುವ ಕರ್ನಾಟಕದ ಅದರಲ್ಲೂ ಮೈಸೂರಿನ ಮೈಸೂರು ಪಾಕ್ ವಿಶ್ವದ ಅತ್ಯುತ್ತಮ ತಿನಿಸು ಎಂಬ ಕೀರ್ತಿಗೆ ಪಾತ್ರವಾಗಿದೆ.

ಟೇಸ್ಟ್‌ ಅಟ್ಲಾಸ್‌ ಪ್ರಕಟಿಸಿರುವ ವಿಶ್ವದ ಟಾಪ್‌ 50 ಬೀದಿಬದಿ ಸಿಹಿ ತಿನಿಸುಗಳ ಪೈಕಿ ಮೈಸೂರ್‌ ಪಾಕ್‌ 14ನೇ ಸ್ಥಾನ ಪಡೆದಿರುವುದು ಕನ್ನಡಿಗರ ಹೆಮ್ಮೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಣ್ಣಿಸಿದ್ದಾರೆ.

“>

ಟೇಸ್ಟ್‌ ಅಟ್ಲಾಸ್‌ ಪ್ರಕಟಿಸಿರುವ ಮೈಸೂರು ಪಾಕ್ ಸ್ಥಾನ ಪಡೆದ ನಂತರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ತಂದೆಯವರು ಹಾಗೂ ಮನೆಗೆ ಬರುತ್ತಿದ್ದ ಸಂಬಂಧಿಕರು ಆಗಾಗ್ಗೆ ಮೈಸೂರು ಪಾಕ್‌ ತಂದಾಗ ಹಂಚಿ ತಿನ್ನುತ್ತಿದ್ದ ಬಾಲ್ಯದ ನೆನಪುಗಳು ಹಾಗೇ ಇವೆ. ಮೈಸೂರು ಅರಮನೆಯಲ್ಲಿ ಜನ್ಮತಾಳಿದ ಮೈಸೂರ್‌ ಪಾಕ್‌ ಇಂದು ಮನೆ ಮನೆಗಳಿಗೂ ತಲುಪುವುದರ ಹಿಂದೆ ಲಕ್ಷಾಂತರ ಬಾಣಸಿಗರ ಶ್ರಮ, ಕೌಶಲ್ಯ ಅಡಗಿದೆ. ಅವರೆಲ್ಲರಿಗೂ ಇದರ ಶ್ರೇಯಸ್ಸು ಸಲ್ಲಬೇಕು ಎಂದು ಬಾಲ್ಯವನ್ನು ಮೆಲಕು ಹಾಕಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ