ಕರ್ನಾಟಕ ಸಂಘದ ವತಿಯಿಂದ ನಡೆಯುತ್ತಿರುವ ನಾಟಕೋತ್ಸವದಲ್ಲಿ ಜು.30 ಭಾನುವಾರ ಸಂಜೆ 6 ಗಂಟೆಗೆ ಮಂಡ್ಯದ ವಿವೇಕಾನಂದ ರಂಗ ಮಂದಿರದಲ್ಲಿ ಮಂಡ್ಯ ತಾಲ್ಲೂಕಿನ ಬೇಲೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ”ಕರಿಭಂಟನ ಕಾಳಗ ಮೂಡಲಪಾಯ ಯಕ್ಷಗಾನ ಪ್ರದರ್ಶನ” ನೀಡಲಿದ್ದಾರೆ.
ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಪ್ರೇಕ್ಷಕರು ಪ್ರೋತ್ಸಾಹದ ಅವಶ್ಯಕತೆ ಇದ್ದು, ಕಲಾಭಿಮಾನಿಗಳು ತಪ್ಪದೇ ಪ್ರದರ್ಶನ ವೀಕ್ಷಣೆ ಮಾಡಿ, ಪ್ರೋತ್ಸಾಹ ನೀಡುವಂತೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಉಷಾ ಸಂಜಯ್ ಮನವಿ ಮಾಡಿದ್ದಾರೆ.




