ರಕ್ತದಾನದಿಂದ ಮಾತ್ರ ಒಬ್ಬ ವ್ಯಕ್ತಿಗೆ ಜೀವದಾನ ಮಾಡುವುದು ಸಾಧ್ಯ ಎಂಬುದು ಎಲ್ಲರ ಅರಿವಿಗೆ ಬರಬೇಕಿದೆ ಎಂದು ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಮಂಡ್ಯ ಜಿಲ್ಲಾ ಶಾಖೆಯ ಹಿರಿಯ ಕ್ಷೇತ್ರ ಅಧಿಕಾರಿ ಕೆಂಪರಾಜು ಹೇಳಿದರು.
ಮಂಡ್ಯ ನಗರದ ಅಶೋಕನಗರದಲ್ಲಿರುವ ಇಂಡಿಯನ್ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ ಜಿಲ್ಲಾ ಶಾಖೆ ಆಯೋಜಿಸಿದ್ದ 25ನೇ ವಾರ್ಷಿಕೋತ್ಸವ ಅಂಗವಾಗಿ ಮಂಡ್ಯ, ನಾಗಮಂಗಲ, ಮದ್ದೂರು ಶಾಖೆ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹುಟ್ಟಿದ ಮನುಷ್ಯ ಒಮ್ಮೆಯಾರೂ ದೇಹದಲ್ಲಿನ ದ್ರವರೂಪದ ಸಂಜೀವಿನಿ ರಕ್ತವನ್ನು ದಾನಮಾಡಿ ಮಾನವೀತೆ ಮರೆಯಬೇಕು, ತನ್ನ ಆರೋಗ್ಯದ ಹಿತಕಾಯ್ದುಕೊಂಡು ಅಗತ್ಯ ಉಳ್ಳವರಿಗೆ ರಕ್ತದಾನ ಮಾಡಿ ಜೀವ ಉಳಿಸುವ ಸುಕಾರ್ಯ ಇದೊಂದೆ ಎಂದು ನುಡಿದರು.

ಹಿರಿಯ ಕ್ಷೇತ್ರ ಅಧಿಕಾರಿ ತಗ್ಗಹಳ್ಳಿ ಟಿ.ಡಿ. ಬಸವರಾಜು, ನೇತ್ರದಾನ ಮತ್ತು ರಕ್ತದಾನ ಶ್ರೇಷ್ಠವಾಗಿದೆ, ಅನ್ನದಾನ ಒಂದು ಹೊತ್ತು ಹಸಿವನ್ನು ನೀಗಿಸಿ ಮುನ್ನದಾನವಿಲ್ಲ ಎನಿಸಿಕೊಂಡಿದೆ, ರಕ್ತದಾನದಿಂದ ಜೀವ ಉಳಿಸುವ ಸುಕಾರ್ಯದಲ್ಲ ಎಲ್ಲರೂ ಸಹಕಾರ ನೀಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸೊಸೈಟಿಯ ಮಂಡ್ಯ, ಮದ್ದೂರು, ನಾಗಮಂಗಲ ಶಾಖೆಗಳ ಸಿಬಂದಿಗಳು, ಬೆಂಬಲಿಗರು ರಕ್ತದಾನ ಮಾಡಿ ಮಾನವೀಯತೆ ಮೆರೆದರು. ಸುಮಾರು 60ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ ಜಿಲ್ಲಾ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಸಿಬ್ಬಂದಿಗಳಾದ ಕೆಂಪರಾಜು, ಸಿ.ಜಯರಾಂ, ಸಂಜೀವಿನಿ ರಕ್ತನಿಧಿ ಕೇಂದ್ರದ ವೈದ್ಯ ಡಾ. ಯಶ್ವಂತ್, ಸೊಸೈಟಿ ಬೆಂಬಲಿಗರಾದ ಪ್ರಮೀಳಾ ಯೋಗೇಶ್, ಅನಿತಾ, ವಕೀಲ ಸುರೇಶ್ ಮತ್ತಿತರರಿದ್ದರು.




