ಪ್ರಸ್ತುತ ಕಸಬಾ ಕೃಷಿ ಪತ್ತಿನ ಸಹಕಾರ ಸಂಘವು ಹಂತ ಹಂತವಾಗಿ ಅಭಿವೃದ್ದಿ ಕಾಣಲು ಸಿಇಓ ಆಗಿದ್ದ ಜಿ.ಜಿ.ಜಯಪಾಲ್ ಅವರ ಶ್ರಮವಿದೆ ಎಂದು ಕಸಬಾ ಕೃಷಿಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಎಂ.ಕೃಷ್ಣ ಹೇಳಿದರು.
ಮಂಡ್ಯ ನಗರದ ಪತ್ರಿಕಾಭವನದಲ್ಲಿ ಕಸಬಾ ಕೃಷಿಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಆಯೋಜಿಸಿದ್ದ ನಿವೃತ್ತಿಗೊಂಡ ಸಿಇಓ ಜಿ.ಜಿ.ಜಯಪಾಲ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಜಿ.ಜಿ.ಜಯಪಾಲ್ ಅವರನ್ನು ಅಭಿನಂದಿಸಿ ಬೀಳ್ಗೊಟ್ಟರು.
ನಾವು 1995ರಲ್ಲಿ ಸಂಘದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕೇವಲ ಎರಡೂವರೆ ಸಾವಿರ ಬಾಡಿಗೆ ಬರುತ್ತಿತ್ತು, ಗಂಗಕಲ್ಯಾಣ ಯೋಜನೆಯಡಿ ಬಾಡಿಗೆ ಕೊಟ್ಟಿದ್ದೇವು, ಪ್ರತಿ ತಿಂಗಳ ಸಂಬಳಕ್ಕಾಗಿ ಕೊಡಲು 18 ಸಾವಿರಬೇಕಿತ್ತು, ತುಂಬ ನಷ್ಟದಲ್ಲಿ ನಡೆಯುತ್ತಿತ್ತು, ಕಟ್ಟಡದ ಮೇಲ್ಚಾವಣಿ ಬೀಳುವ ದುಸ್ಥಿತಿಯ ಹಂತದಲ್ಲಿತ್ತು ಎಂದು ಸ್ಮರಿಸಿದರು.
ನಿರ್ದೇಶಕರು ಕುಳಿತು ಚರ್ಚಿಸಿ, ಬೇರೆ ದಾರಿಕಾಣದೆ ಸಂಘದ ಬೈಲಾ ತಿದ್ದುಪಡಿಗೆ ಮುಂದಾದೆವು, ಅಭಿವೃದ್ದಿಗಾಗಿ ನಾಟಕವಾಡಿ, ಅಭಿವೃದ್ದಿಗೆ ಪಣತೊಟ್ಟೆವು, ಮೂಲ ಬಟೆವಾಡಿಗೆ ಡಿಸಿಸಿಬ್ಯಾಂಕ್ನಿಂದ ಆರುಪಟ್ಟು ಸಾಲ ಮಂಜೂರಾಯಿತು, 13 ವರ್ಷಗಳಿಂದ ಅಭಿವೃದ್ದಿ ಕಾಣದೆ ಇದ್ದ ಸಂಘವು ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ಚಿಕ್ಕಮಂಡ್ಯ-ಚಿನ್ನಗಿರಿದೊಡ್ಡಿಯಲ್ಲಿ ಸಂಘದ ವತಿಯಿಂದ ಪಡಿತರ ವಿತರಣೆ ಕಾರ್ಯಸಾಗುತ್ತಿತ್ತು, ಅದು ಖಾಸಗೀಯವರ ಪಾಗಿತ್ತು, ಅದನ್ನು ವಶಪಡೆದು ಅದರಿಂದ 4-5 ಸಾವಿರ ಆದಾಯ ಬರುವಂತೆ ಮಾಡಿದೇವು, ಹೊಸಹಳ್ಳಿಯಲ್ಲಿರುವ ಗೋಡನ್ ಅನ್ನು ಪುನರ್ಚೇತನಗೊಳಿಸಿ, ಖಾಸಗಿಯವರಿಗೆ ಬಾಡಿಗೆ ನೀಡಿ, ಬಾಡಿಗೆ ಬರುವಂತೆ ಮಾಡಿದೆವು ಎಂದು ನುಡಿದರು.
ಇದೇ ಸಂದರ್ಭದಲ್ಲಿನಿವೃತ್ತಿಗೊಂಡ ಸಿಇಓ ಜಿ.ಜಿ.ಜಯಪಾಲ್ ಅವರನ್ನು ಆಡಳಿತ ಮಂಡಳಿ ಮತ್ತು ನಿರ್ದೇಶಕರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರೈತರ ಸೊಸೈಟಿ ಅಧ್ಯಕ್ಷ ಉಮ್ಮಡಹಳ್ಳಿ ಯು.ಸಿ.ಶೇಖರ್, ನಿರ್ದೇಶಕ ಕಲ್ಲಹಳ್ಳಿ ರವೀಂದ್ರ, ಕಸಬಾ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್.ಧರ್ಮೇಂದ್ರ, ನಿರ್ದೇಶಕರಾದ ಬೋರೇಗೌಡ, ರಾಜು, ಮಂಗಳಗೌರಿ, ಶೋಭಾ, ಮಾಜಿ ಅಧ್ಯಕ್ಷ ಕಲ್ಲಹಳ್ಳಿ ಆನಂದ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮತ್ತಿತರರಿದ್ದರು.




