Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಉದ್ಯಾನವನಗಳ ವ್ಯಾಯಾಮ ಉಪಕರಣಗಳ ದುರಸ್ಥಿಗೆ ಮನವಿ

ಮಂಡ್ಯ ನಗರದ ಉದ್ಯಾನವನಗಳ ಅಭಿವೃದ್ಧಿ ಮಾಡುವುದರ ಜೊತೆಗೆ, ಹದಗೆಟ್ಟಿರುವ ವ್ಯಾಯಾಮ ಉಪಕರಣಗಳನ್ನು ದುರಸ್ತಿಪಡಿಸುವಂತೆ ಕನ್ನಡ ಸೇನೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿತು.

ಮಂಡ್ಯ ನಗರದಲ್ಲಿ 35 ಕ್ಕೂ ಹೆಚ್ಚು ಪಾರ್ಕ್‌ಗಳು ಇವೆ. ಪಾಕ್‌ಗಳು ಬಹುತೇಕ ಮೂಲಭೂತ ಸೌಕರ್ಯವಿಲ್ಲದೆ ವಂಚಿತವಾಗಿವೆ. ಪಾರ್ಕ್‌ಗಳಲ್ಲಿ ಎಲ್ಲ ವರ್ಗದ ಜನರು ಪಾರ್ಕ್‌ಗಳಲ್ಲಿ ವಾಯುವಿಹಾರ ಮಾಡುವ ದೊಡ್ಡ ಗುಂಪೇ ಇದೆ, ಅವರ ಆರೋಗ್ಯದ ದೃಷ್ಟಿಯನ್ನಿಟ್ಟುಕೊಂಡು ವ್ಯಾಯಾಮ ಉಪಕರಣಗಳನ್ನು ದುರಸ್ತಿ ಮಾಡಿಸಬೇಕೆಂದು ಕೋರಿದರು.

ಜಾಹೀರಾತು

ಮಂಡ್ಯ ನಗರದಲ್ಲಿ 15 ಕ್ಕೂ ಹೆಚ್ಚು ಪಾರ್ಕ್‌ಗಳಲ್ಲಿ ಎಲ್ಲ ವಯಸ್ಸಿನ ಜನರ ಆರೋಗ್ಯಕ್ಕಾಗಿ ವ್ಯಯಾವ ಉಪಕರಣಗಳನ್ನು ಅಳವಡಿಸಲಾಗಿದೆ.ಇದರಲ್ಲಿ ಬೋರೇಗೌಡ ಪಾರ್ಕ್‌, ಸುಶೀಲಮ್ಮ ಪಾರ್ಕ್‌, ಶಿವನಂಜಪ್ಪ, ಪಾರ್ಕ್, ಅನೆ ಪಾರ್ಕ್ ನಗರದ ಇನ್ನು 10 ಕ್ಕೂ ಹೆಚ್ಚು ಪಾರ್ಕ್‌ಗಳಲ್ಲಿ ಈಗಾಗಲೇ ಅಳವಡಿಸಿರುವ ಉಪಕರಣಗಳು ಮುರಿದು, ತುಕ್ಕು ಹಿಡಿದು ಕಳೆದ 2 ವರ್ಷಗಳಿಂದ ದುರಸ್ತಿಯಲ್ಲಿವೆ. ವಾಕ್ ಮಾಡುವ ಜನರು ಬಹಳಷ್ಟು ಭಾರಿ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಪಾರ್ಕ್‌ಗಳಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ ಶೌಚಾಲಯ ವ್ಯವಸ್ಥೆ, ಸಸಿಗಳ ನೆಡುವಿಕೆ ಇನ್ನು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, 15 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಕನ್ನಡ ಸೇನೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೆಚ್.ಸಿ.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ