ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಬ್ಯಾಲದಕೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪ್ರೇಮ ದ್ಯಾವೇಗೌಡ, ಉಪಾಧ್ಯಕ್ಷರಾಗಿ ಸುಜಾತ ಮಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ವಿನೋದ ವೆಂಕಟೇಶ್, ಯಶೋಧ ಸತೀಶ್, ಭಾಗ್ಯ ಜಯರಾಂ, ಸುಶೀಲ ಮಂಜೇಗೌಡ, ಸುಧಾ ವೆಂಕಟೇಶ್, ಲಕ್ಷ್ಮಮ್ಮ ಚನ್ನೇಗೌಡ, ಸುಧಾ ವೆಂಕಟೇಶ್, ಜಿ.ಕೆ.ವಿನೋದ ಲೋಕೇಶ್, ನಾಗಮ್ಮಬೆಟ್ಟಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್.ಮುಕ್ತ, ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಶೋಭಾ ಶಶಿಧರ್ ಕಾರ್ಯನಿರ್ವಹಣೆ ಮಾಡಿದರು.
ನೂತನ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಗ್ರಾಮದ ಮುಖಂಡರಾದ ಗ್ರಾ.ಪಂ.ಮಾಜಿ ಅಧ್ಯಕ್ಷ ಪಾಪೇಗೌಡ, ಮಾಜಿ ಗ್ರಾ.ಪಂ.ಸದಸ್ಯರಾದ ನಂಜೇಗೌಡ, ದೇವೇಗೌಡ, ಗ್ರಾ.ಪಂ.ಸದಸ್ಯರಾದ ಅಶೋಕ್, ಮುಖಂಡರಾದ ಬಿ.ಪಿ.ಕೃಷ್ಣೇಗೌಡ, ಬಿ.ಪಿ.ಅಣ್ಣಯ್ಯ, ಬಿ.ಪಿ.ಮರೀಗೌಡ, ಬಿ.ಸಿ.ಮಂಜೇಗೌಡ, ರಾಧಾಕೃಷ್ಣ, ಬಿ.ಕೆ.ಕುಮಾರ್, ಬಿ.ಎನ್.ಮಂಜೇಗೌಡ, ಬಿ.ಬಿ.ಶಿವಕುಮಾರ್, ಕಿರಣ್.ಬಿ.ಎಂ, ಶ್ರೀನಿವಾಸ್, ಚನ್ನೇಗೌಡ, ಸಂಘದ ಸಿ.ಇ.ಓ ಶೋಭಾ, ಹಾಲು ಪರೀಕ್ಷಕಿ ಆಶಾರಮೇಶ್ ಸೇರಿದಂತೆ ಗ್ರಾಮದ ಮುಖಂಡರು ಸಂಘದ ಶೇರುದಾರರು ಅಭಿನಂದಿಸಿದರು.




