Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನೂತನ ಬಿಇಓ ಮಹದೇವ್ ಅಧಿಕಾರ ಸ್ವೀಕಾರ

ಮಂಡ್ಯ ತಾಲೂಕು ದಕ್ಷಿಣ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಆಗಿ ಮಹದೇವ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ನಿರ್ಗಮಿತ ಬಿಇಓ ಉದಯಕುಮಾರ್ ಅವರನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಮಂಡ್ಯ ತಾಲೂಕು ದಕ್ಷಿಣ ವಲಯದ ಪದಾಧಿಕಾರಿಗಳು ಗೌರವಿಸಿ ಬೀಳ್ಗೊಟ್ಟರು.

ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣಮಂಗಲ, ಪದಾಧಿಕಾರಿಗಳಾದ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಜಯರಾಮ್ ಆರ್, ಉಪಾಧ್ಯಕ್ಷೆ ಸುರೇಖಾ, ಸಂಘಟನಾ ಕಾರ್ಯದರ್ಶಿ ಡಿ.ಕೆ ಜಗದೀಶ್, ಖಜಾಂಚಿ ಮಹಂತದೇವರು, ನಿರ್ದೇಶಕರಾದ ಶ್ರೀನಿವಾಸ್, ಜಿ.ಎಸ್.ಸಿದ್ದರಾಜು, ವಸಂತ್ ಕುಮಾರ್, ಶ್ರೀಧರಮೂರ್ತಿ, ಚಿಕ್ಕತಿಮ್ಮಯ್ಯ, ಶರತ್ ಕುಮಾರ್ ಮತ್ತಿತರರು ನೂತನ ಬಿಇಓ ಅವರನ್ನು ಸ್ವಾಗತಿಸಿ, ಅಭಿನಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ