ಉದಾರ ಹೃದಯಿ, ಕಾಯಕ ಯೋಗಿ, ಸರ್ವಧರ್ಮಗಳ ಪ್ರೀತಿಯ ಉಪಾಸಕ ಹೆಮ್ಮೆಯ ಕನ್ನಡಿಗ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಮಾಜಸೇವಕರ ಹಾಗೂ ಉದ್ಯಮಿಗಳಾದ ಮೊಹಮ್ಮದ್ ಜಫ್ರುಲ್ಲಾಖಾನ್ ಹುಟ್ಟುಹಬ್ಬದ ಅಂಗವಾಗಿ ಇಂದು ಮಿಮ್ಸ್ ನ ಹೆರಿಗೆ ವಾರ್ಡ್ ಬಳಿ ಇರುವ ಮಮತೆಯ ಮಡಿಲು ನಿತ್ಯ ದಾಸೋಹದಲ್ಲಿ ಬೆಳಗ್ಗಿನ ಉಪಹಾರ ವಿತರಣೆ ಮಾಡಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಪ್ರಜಾವಾರ್ತೆ ಸಂಪಾದಕ ನವೀನ್ ಕುಮಾರ್ ನೇತೃತ್ವದಲ್ಲಿ ಮಿಮ್ಸ್ ಆವರಣದಲ್ಲಿ ಹೆರಿಗೆ ವಿಭಾಗದ ಬಳಿ ಗರ್ಭೀಣಿ, ಬಾಣಂತಿಯರು ಹಾಗೂ ಅವರ ಕುಟುಂಬಸ್ಥರಿಗೆ ಉಪಹಾರವನ್ನು ವಿತರಣೆ ಮಾಡಲಾಯಿತು.

ನಂತರ ಮಾತನಾಡಿದ ಅವರು, ಜಫ್ರುಲ್ಲಾಖಾನ್‌ರವರ ಹುಟ್ಟುಹಬ್ಬವನ್ನು ರಾಜ್ಯಾದಂತ ಅವರ ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ಅವರ ಸಮಾಜಮುಖಿ ಸೇವಾ ಮನೋಭಾವನೆಯಂತೆ ಗರ್ಭೀಣಿ ಹಾಗೂ ಬಾಣಂತಿಯರಿಗೆ ತಿಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶದಲ್ಲೇ ಧರ್ಮಾತೀತವಾಗಿ ಹಾಗೂ ಜಾತ್ಯಾತೀತವಾಗಿ ಜಫ್ರುಲ್ಲಾಖಾನ್ ಅವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ, ಅವರ ಹುಟ್ಟುಹಬ್ಬ ಆಚರಣೆ ಹೆಚ್ಚು ಖುಷಿ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಧನೆಯ ಕಿರುಪುಸ್ತಕವನ್ನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಕೆ.ಪಿ. ಶಶಿಕುಮಾರ್, ನಾರಾಯಣಸ್ವಾಮಿ ಉಪಸ್ಥಿತರಿದ್ದರು




