Friday, November 20, 2026

ಪ್ರಾಯೋಗಿಕ ಆವೃತ್ತಿ

ಜಿಲ್ಲಾಧಿಕಾರಿ ಆದೇಶ ತಿರುಚಿ ನಿವೇಶನರಹಿತರಿಗೆ ವಂಚನೆ; ಬೂದನೂರು ಸತೀಶ್

ಮಂಡ್ಯ ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ಸಂಖ್ಯೆಯನ್ನು ಕಡತದಲ್ಲಿ 134/2015 ನ್ನು ಆನ್‌ಲೈನ್ ನಲ್ಲಿ ಆಪ್’ಲೋಡ್ ಮಾಡುವಾಗ ನಕಲಿ ದಾಖಲೆ ಸೃಷ್ಟಿಸಿ ಆರ್’ಪಿ 92/2018 ಎಂದು ನಮೂದಿಸಿ ಅಕ್ರಮ ಎಸಗಲಾಗಿದ್ದು, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶವನ್ನೇ ತಿರುಚಿ ಅಧಿಕಾರಿಗಳು ನಿವೇಶನರಹಿತರನ್ನು ವಂಚಿಸುತ್ತಿದ್ದಾರೆಂದು ”ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ” ಸಂಚಾಲಕ ಬೂದನೂರು ಸತೀಶ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂದನೂರು ಗ್ರಾಮದ ಸರ್ವೇ ನಂ 139, 141, 142, 143, 144 ರಲ್ಲಿ 1976ರಲ್ಲಿ‌ ನಿವೇಶನರಹಿತರಿಗೆ ಮಂಜುರಾಗಿರುವ ಭೂಮಿಗೆ ಕಂದಾಯಾಧಿಕಾರಿಗಳು ಬದುಕಿರುವ ವ್ಯಕ್ತಿ ಸಿದ್ದರಾಜು ಎಂಬುವವರನ್ನು ಲೇಟ್ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಬಿ.ಸಿ.ಪುಟ್ಟರಾಜು ಎಂಬಾತನ ಹೆಸರನ್ನು ಬಿ.ಸಿ.ಪುಟ್ಟರಾಮು ಎಂದು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಅಕ್ರಮ ಎಸಗಿದ್ದಾರೆ. ಈ ಅಕ್ರಮದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ ಎಂದು ಸಂಶಯ ವ್ಯಕ್ತಪಡಿಸಿದರು.

ನಕಲಿ ವ್ಯಕ್ತಿಗಳನ್ನು ಅದನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದು, ನಿವೇಶನರಹಿತರ ನಿವೇಶನ ಹಂಚಿಕೆಗೆ ತೊಡಕಾಗಿದ್ದಾರೆ. ಅಲ್ಲದೆ ವ್ಯಕ್ತಿಯೊಬ್ಬರು ಭೂಸ್ವಾಧೀನವಾಗಿರುವ ಭೂಮಿಯನ್ನು ತಮಗೆ ಬಿಟ್ಟು ಪಕ್ಕದಲ್ಲಿರುವ ತಮ್ಮ ಭೂಮಿ ತೆಗೆದುಕೊಳ್ಳುವಂತೆ ಹೈಕೋರ್ಟ್ ‌ಮೆಟ್ಟಿಲೇರಿದ್ದಾರೆ. ಎದುರುದಾರರು ಗ್ರಾಮದಲ್ಲಿ ವಾಸವಾಗಿದ್ದರೂ ವಾಸವಾಗಿಲ್ಲ ಎಂದು ಜಿಲ್ಲಾಧಿಕಾರಿಗಳನ್ನೇ ಯಾಮಾರಿಸಿದ್ದಾರೆ. ಒಟ್ಟಾರೇ ಸರ್ಕಾರಿ ಆಸ್ತಿ ಲಪಟಾಯಿಸಲು ರಾಜಸ್ವ ನಿರೀಕ್ಷಕ, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ್ ಬೆಂಬಲ ನೀಡಿ ಅನಾವಶ್ಯಕ ಗೊಂದಲ ಸೃಷ್ಟಿಸಿದ್ದಾರೆ ಎಂದು ದೂರಿದರು.

ಈ ಕುರಿತು ತನಿಖೆ ನಡೆಸಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ನಿವೇಶನ ಹಂಚಿಕೆಗೆ ಕ್ರಮ ವಹಿಸದಿದ್ದಲ್ಲಿ ಆ.15 ರ ಸ್ವಾತಂತ್ರ್ಯ ದಿನಾಚರಣೆ ದಿನ ನಿವೇಶನರಹಿತರು ಕಪ್ಪು ಪಟ್ಟಿ ಧರಿಸಿ ನಗರದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ, ನಿವೇಶನರಹಿತ ಹೋರಾಟಗಾರರಾದ ಸವಿತಾ, ಪದ್ಮ, ನಾಗರತ್ನ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ