ನಿನ್ನೆಯ ತನಕ ದೇಶದ ಯಾವುದೇ ರಾಜಕಾರಣಿ ಅಮಿತ್ ಷಾ ಹೆಸರು ಕೇಳಿದರೆ ನಿದ್ರೆಯಲ್ಲಿಯೂ ಸಹ ಬೆಚ್ಚುತ್ತಿದ್ದರು, ಅಮಿತ್ ಷಾ ಎಂಬ ಚಾಣಕ್ಯ ಯಾವ ಹೊತ್ತಿನಲ್ಲಿ ಯಾರ ಟಿಕೆಟ್ ಕಿತ್ತು ಹಾಕುತ್ತಾರೆ ಯಾರ ಸರ್ಕಾರ ಬಿಳಿಸುತ್ತಾರೆ ಅಥವಾ ಯಾರ ಮನೆ ಬಾಗಿಲಿಗೆ ಇಡಿ, ಇನ್ಕಾಮ್ ಟ್ಯಾಕ್ಸ್ ಅವರನ್ನು ಕಳಿಸುತ್ತಾರೆ ಯಾರನ್ನು ಜೈಲಿಗೆ ಕಳಿಸುತ್ತಾರೆ ಎಂದು ಊಹಿಸಲು ಸಹ ಸಾಧ್ಯವಾಗುತ್ತಿರಲಿಲ್ಲ.
ಮೋದಿಜೀ ಅವರ ಬಲಗೈ ಬಂಟನಾಗಿ ಅವರ ನಂಬಿಕೆಯ ಲೆಫ್ಟಿನೆಂಟ್ ಆಗಿ ಇದ್ದ ವ್ಯಕ್ತಿಯ ಬಗ್ಗೆ ದೆಹಲಿಯಿಂದ ಬರುತ್ತಿರುವ ಸುದ್ದಿಗಳ ಪ್ರಕಾರ ಮೋದಿಜೀ ಅವರ ಕ್ಯಾಬಿನೆಟ್ ಒಳಗೆ ಅಮಿತ್ ಷಾ ಅವರಿಗೆ ಜಾಗವಿಲ್ಲ ಎಂಬುದು, ಸದ್ಯಕ್ಕೆ ಚಂದ್ರಬಾಬು ನಾಯ್ಡು ಮತ್ತು ನಿತಿಶ್ ಕಮಾರ್ ಇಬ್ಬರೂ ಸಹ ಅಮಿತ್ ಷಾ ಅವರು ಕ್ಯಾಬಿನೆಟ್ ಒಳಗೆ ಇರಬಾರದು ಅವರು ಇದ್ದರೆ ನಾವು ಹೊರಗಿನಿಂದ ಬೆಂಬಲ ಕೊಡುತ್ತೇವೆ ಎನ್ನುವ ಬೇಡಿಕೆ ಇಟ್ಟಿದ್ದು, ಒಂದು ಪಕ್ಷ ಇದಕ್ಕೆ ಮೋದಿಜೀ ಒಪ್ಪಿಕೊಂಡರೆ ಭಾರತದ ರಾಜಕಾರಣದ ಅತ್ಯಂತ ಚಾಣಕ್ಯ ವ್ಯಕ್ತಿ ಎಂದು ಕರೆಸಿಕೊಂಡ ಅಮಿತ್ ಷಾ ಅವರ ಯುಗಾಂತ್ಯವಾಗುವುದು ಖಂಡಿತವಾಗುತ್ತೆ.




