Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಅಸ್ತಿತ್ವಕ್ಕೆ

ಕೆ.ಆರ್.ಪೇಟೆ ತಾಲ್ಲೂಕಿನ   ಉದ್ದಿನ ಮಲ್ಲನ ಹೊಸೂರು ಕೊಪ್ಪಲಿನಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಗ್ರಾಮ ಘಟಕ ಉದ್ಘಾಟಿಸಿದ ಸಂಘದ ರಾಜ್ಯ ಅಧ್ಯಕ್ಷ ಪುಟ್ಟಮಾದು, ನಾಮಫಲಕ ಅನಾವರಣ ಮಾಡಿದರು.
ಕೂಲಿ ಕಾರ್ಮಿಕರು, ಮಹಿಳೆಯರು, ಕಾರ್ಮಿಕರು ರಸ್ತೆ ಮೂಲಕ ಪಥತ ಸಂಚಲನ  ಮಾಡುವ ಮೂಲಕ ಹಲೋ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗುತ್ತಾ ಕಾರ್ಯಕ್ರಮದ ವೇದಿಕೆ ಪ್ರವೇಶಿಸಿದರು.
ನಂತರ ಪುಟ್ಟಮಾದು ಮಾತನಾಡಿ, ಉದ್ಯೋಗ ಖಾತರಿ ನಿರಂತರ ಕೂಲಿಕಾರರಿಗೆ ಸಿಗಬೇಕು ಪ್ರತಿ ಗ್ರಾಮಗಳಿಗೂ ಸ್ಮಶಾನ ಇರಬೇಕು, ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿನ ಸವಲತ್ತು ದೊರಕಬೇಕು. ಕೂಲಿಕಾರರ ಮಕ್ಕಳಿಗೂ ಕೂಡ ಒಳ್ಳೆ ವಿದ್ಯಾಭ್ಯಾಸ ದೊರಕಬೇಕು. ಸರ್ಕಾರದ ಸವಲತ್ತು ನೇರವಾಗಿ ಕೂಲಿ ಕಾರ್ಮಿಕರಿಗೆ ತಲುಪುವಂತೆ ಆಗಬೇಕು, ಸಂಘಟನೆಗಳು ಬಲಗೊಳ್ಳಬೇಕು, ಈ ದಿನ ಉದ್ದಿನ ಮಲ್ಲ ಹೊಸೂರ್ ಕೊಪ್ಪಲಿನಲ್ಲಿ ಕೂಲಿಕಾರರ ಸಂಘವನ್ನು ಉದ್ಘಾಟಿಸಿ ಸಂಘಟನೆ ಮಾಡುತ್ತಿರುವ ಎಲ್ಲರಿಗೂ ಮೂಲಕ ಅಭಿನಂದನೆಗಳು ಎಂದರು.
ಜಾಹೀರಾತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ವಹಿಸಿದ್ದರು.ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್ ಪ್ರಾಸ್ತವಿಕ ನುಡಿಗಳನ್ನು ನುಡಿದರು, ಕೃಷ್ಣರಾಜಪೇಟೆ ತಾಲೂಕು ಅಧ್ಯಕ್ಷ ಗಿರೀಶ್ ಜಿ ಎಚ್ ನೇತೃತ್ವ ವಹಿಸಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಗೋಪಾಲ್ ವಂದನಾರ್ಪಣೆ ಮಾಡಿದರು.
77ನೇ ಸ್ವಾತಂತ್ರ್ಯೋತ್ಸವದಂದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಕಳೆದ ಆಗಸ್ಟ್ 1ರಿಂದ 14ರವರೆಗೆ ದೇಶ ವ್ಯಾಪ್ತಿ ಪ್ರಚಾರಂದೋಲನ, ಅಹೋರಾತ್ರಿ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವೇಗೌಡ, ಕಾಳೇಗೌಡ, ಪೂಜಾ, ಜಯಮ್ಮ, ರಾಜಮ್ಮ, ಲಕ್ಷ್ಮಿ, ರಾಧಮ್ಮ ಇನ್ನು ಹಲವು ಮಹಿಳೆಯರು, ಗಂಗೆನಹಳ್ಳಿ, ಶ್ರಾವಣಳ್ಳಿ, ಕಿಕ್ಕೇರಿ, ಉದ್ದಿನ ಮಲ್ಲ ಹೊಸೂರು, ಗ್ರಾಮ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ