Saturday, November 21, 2026

ಪ್ರಾಯೋಗಿಕ ಆವೃತ್ತಿ

ವೀರಯೋಧರ ಉದ್ಯಾನವನ ಅಭಿವೃದ್ದಿ ₹5 ಲಕ್ಷ ಅನುದಾನ- ಶಾಸಕ ರವಿಕುಮಾರ್

ಮಂಡ್ಯನಗರದಲ್ಲಿರುವ ವೀರಯೋಧ ಉದ್ಯಾನವನ ಅಭಿವೃದ್ದಿ ₹5 ಲಕ್ಷ ಅನುದಾನ ಒದಗಿಸುವುದಾಗಿ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಮಂಡ್ಯ ನಗರಸಭೆ ವತಿಯಿಂದ ಸ್ವರ್ಣಸಂದ್ರ ಬಡಾವಣೆಯ ವೀರ ಯೋಧರ ಉದ್ಯಾನವನದಲ್ಲಿ ನಡೆದ ”ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿ ಮಡಿದ ಯೋಧರಾದ ಶರತ್ ಹಾಗೂ ಸುದೀರ್ ಅವರನ್ನು ಸ್ಮರಿಸುವ ಈ ಉದ್ಯಾನವನ್ನು ಹಂತ ಹಂತವಾಗಿ ಸಮಗ್ರ ಅಭಿವೃದ್ದಿ ಮಾಡಲಾಗುವುದು ಎಂದರು.

ನಾವು ಇಲ್ಲಿ ನಿಶ್ಚಿಂತೆಯಿಂದ ಜೀವಿಸಬೇಕಾದರೆ, ಗಡಿಯಲ್ಲಿ ಯೋಧರು ಎಚ್ಚರವಾಗಿರಬೇಕಾಗುತ್ತದೆ, ಅವರ ತ್ಯಾಗ ದೊಡ್ಡದ್ದು. ನಮ್ಮ ತಾತಾ ಅವರು ಕೂಡ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಆದ್ದರಿಂದ ಆ ಯೋಧರ ಕುಟುಂಬಗಳ ಕಷ್ಟಗಳು ನನ್ನ ಅರಿವಿನಲ್ಲಿವೆ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

ಪೌರಾಯುಕ್ತ ಮಂಜುನಾಥ್, ಮಾತನಾಡಿ ದೇಶದ ಪ್ರತಿಯೊಂದು ಗ್ರಾ.ಪಂ., ಪುರಸಭೆ, ನಗರಸಭೆಗಳಲ್ಲಿಯೂ ಯೋಧರನ್ನು ಸ್ಮರಿಸುವಂತಹ ಇಂತಹ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ, ಎಲ್ಲಾ ಜಿಲ್ಲೆಗಳಿಂದ ಸಂಗ್ರಹಿಸಿದ ಮಣ್ಣಿನಿಂದ ದೆಹಲಿಯಲ್ಲಿ ಉದ್ಯಾನವನವೊಂದನ್ನು ನಿರ್ಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ ಯೋಧರ ಸ್ಮಾರಕಕ್ಕೆ ಪುಪ್ಪರ್ಚನೆ ಮಾಡಿದರು, ನಂತರ ವೀರ ಯೋಧರ ತಂದೆ ತಾಯಿಯವರಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕಿನಿಂದ ತಂದಿದ್ದ ಮಣ್ಣನ್ನು ಹಿಡಿದು ಪ್ರತಿಜ್ಞೆ ಸ್ವೀಕರಿಸಲಾಯಿತು.

ಬೀಡಿ ಕಾರ್ಮಿಕರ ಕಾಲೋನಿಯಲ್ಲಿ  ಕಾಮಗಾರಿಗೆ ಚಾಲನೆ

ಮಂಡ್ಯ ನಗರದ 3ನೇ ವಾರ್ಡ್ ನ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ 5.ಲಕ್ಷ .ರೂ.ಗಳ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,ಈ ಭಾಗದ ಜನರ ಆಶಯದಂತೆ ಐದು ಲಕ್ಷ ರೂ.ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಿದ್ದೇನೆ. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ನಯೀಮ್,ಜಾಕಿರ್ ಪಾಷ,ಅಭಿ ಮತ್ತು ಬಡಾವಣೆಯ ಮುಖಂಡರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ