Friday, November 20, 2026

ಪ್ರಾಯೋಗಿಕ ಆವೃತ್ತಿ

ಬುದ್ದಿವಾದ ಹೇಳಿದ ಉಪನ್ಯಾಸಕರಿಗೆ ಲಾಂಗ್ ತೋರಿಸಿದ ವಿದ್ಯಾರ್ಥಿ: ವೀಡಿಯೋ ವೈರಲ್

ಕಾಲೇಜಿನ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರಿಗೆ ತಿಳಿಸಿದ್ದ ಉಪನ್ಯಾಸಕರಿಗೆ ವಿದ್ಯಾರ್ಥಿಯೊಬ್ಬ ಲಾಂಗ್‌ ತೋರಿಸಿ ಬೆದರಿಕೆ ಹಾಕಿರುವ ಘಟನೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

“>

ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಅವರೇಗೆರೆ ಗ್ರಾಮದ ಉದಯ್ ಗೌಡ (17) ಕಾಲೇಜಿನ ಕ್ಲಾಸ್ ರೂಂಗೆ ಲಾಂಗ್ ಸಮೇತ ಹೋಗಿ ಉಪನ್ಯಾಸಕರಾದ ಚಂದನ್ ಅವರಿಗೆ ವಾಗ್ವಾದ ನಡೆಸಿರುವ ವೀಡಿಯೋ ವೈರಲ್ ಆಗಿದೆ.

ಉದಯ್ ಗೌಡ ನಾಗಮಂಗಲ ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ತರಗತಿ ಯಲ್ಲಿ ಓದುತ್ತಿದ್ದಾನೆ. ಆತ ಸರಿಯಾಗಿ ತರಗತಿಗೆ ಬರುತ್ತಿಲ್ಲ, ಜೊತೆಗೆ ಆತನ ವರ್ತನೆಯೂ ಸರಿಯಿಲ್ಲ ಎಂದು ಉಪನ್ಯಾಸಕರು ಆತನ ಪೋಷಕರಿಗೆ ತಿಳಿಸಿದ್ದು, ದೊಡ್ಡ ತಪ್ಪು ಎಂಬಂತೆ ವಿದ್ಯಾರ್ಥಿಯು ಉಪನ್ಯಾಸಕರೊಂದಿಗೆ ಉದ್ದಟತನದಿಂದ ವರ್ತಿಸಿದ್ದಾನೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ