ಮಂಡ್ಯದ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಆ.27ರಂದು ನಾನ್ ಮೆಡ್‌ಲಿಸ್ಟ್ ಗಳಿಗಾಗಿ ಜನತಾ ಶಿಕ್ಷಣ ಟ್ರಸ್ಟ್, ರಾಜ್ಯಮಟ್ಟದ ಏಕದಿನ ಈಜು ಸ್ಪರ್ಧೆಗಳನ್ನು ಪಿಇಟಿ ಈಜು ಕೊಳದಲ್ಲಿ ಆಯೋಜಿಸಲಾಗಿದೆ ಎಂದು ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಜು ಸ್ಪರ್ಧೆಗಳಲ್ಲಿ ಒಟ್ಟು 96 ವಿವಿಧ ರೀತಿಯ ಈಜು ಸ್ಪರ್ಧೆಗಳನ್ನು 6 ವರ್ಷದಿಂದ 19ರ ವಯೋಮಾನದವರಿಗೆ ನಡೆಯಲಿವೆ. ಸ್ಪರ್ಧೆಗಳಲ್ಲಿ ಭಾಗವಹಿಸಲು ರಾಜ್ಯದ ಒಟ್ಟು 38 ಈಜು ಕೇಂದ್ರಗಳ 300 ಬಾಲಕರು ಹಾಗೂ 150 ಬಾಲಕಿಯರು ಸೇರಿದಂತೆ ಒಟ್ಟು 450 ಮಂದಿ ಹೆಸರು ನೊಂದಾಯಿಸಿ ಕೊಂಡಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ ಅಧ್ಯಕ್ಷ ಕೆ.ಎಸ್, ವಿಜಯ್ ಆನಂದ್ ವಹಿಸುವರು. ಉದ್ಘಾಟನೆಯನ್ನು ಅಂತರರಾಷ್ಟ್ರೀಯ ಪ್ಯಾರಾ ಈಜುಪಟು ಪುನೀತ್ ನಂದಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಪಿಇಟಿ ಉಪಾಧ್ಯಕ್ಷ ಬಸವಯ್ಯ, ಜಂಟಿ ಕಾರ್ಯದರ್ಶಿ ದಯಾನಂದ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಪಿಇಟಿ ಈಜು ಕೇಂದ್ರದ ಆಡಳಿತಾಧಿಕಾರಿ ಡಾ. ಚಂದ್ರಶೇಖರ್, ತರಬೇತುದಾರ ಗಿರೀಶ್ ಕುಮಾರ್ ಉಪಸ್ಥಿತರಿದ್ದರು.




