Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ಸಮಾನತೆ ಸಿಗಲಿ- ಪೂರ್ಣಿಮಾ

ಪ್ರಸ್ತುತ ಕೌಟುಂಬಿಕ ವ್ಯವಸ್ಥೆಯಲ್ಲಿ ಪರುಷರು ಮತ್ತು ಮಹಿಳೆಯರ ನಡುವೆ ತಾರತಮ್ಯ ಇನ್ನೂ ಇದೆ ಎಂದು ಕೌಟುಂಬಿಕ ಹಕ್ಕುಗಳ ಸಲಹೆಗಾರರಾದ ನ್ಯಾಯವಾದಿ ಪೂರ್ಣಿಮಾ ಹೇಳಿದರು.

ಮಂಡ್ಯ ತಾಲೂಕಿನ ಹೊಸಬೂದನೂರು ಗ್ರಾಮ ಸಮೀಪದ ಲೇಮೆನ್‌ ಗ್ರಾಸ್ ಸಭಾಂಗಣದಲ್ಲಿ ಶಾಹಿ ಸಿ.ಆರ್.ಎಸ್. ಅನುದಾನದಡಿ ಕ್ಷಿತಿಜ್ ಸಂಸ್ಥೆ ಆಯೋಜಿಸಿದ್ದ ಮಹಿಳಾ ಸಮಾನತೆಯ ದಿನಾಚರಣೆ ಮತ್ತು ಗ್ರಾಮೀಣ ಮಹಿಳಾ ಸಬಲೀಕರಣ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾವಂತ ಸಮಾಜದಲ್ಲಿ ಇಂದಿಗೂ ಹೆಣ್ಣಿಗೆ ಪುರುಷರಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಸಿಕ್ಕಿಲ್ಲ. ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಗೌರವ, ಸಮಾನ ಹಕ್ಕುಗಳನ್ನು ನೀಡುವ ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆ.26 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಸಮಾನತೆ

ಕಾನೂನು ಅರಿವು ಪ್ರತಿಕುಟುಂಬದ ಸದಸ್ಯರಿಗೆ ಅಗತ್ಯವಿದೆ, ಅತ್ತೆ, ಸೊಸೆ, ಮಗಳು, ಮಕ್ಕಳು, ಗಂಡ, ಪೋಷಕರಿಗೆ ತಮ್ಮದೇ ಆದ ಕಾನೂನುಗಳ ಮಹಿತಿ ತಿಳಿಯಬೇಕಾಗಿದೆ, ಸಮಾನತೆಯ ಸ್ವಾತಂತ್ರö್ಯ ಪ್ರತಿಮಹಿಳೆಗೂ ಲಭ್ಯವಾಗಬೇಕಿದೆ ಎಂದರು.

ಕ್ಷಿತಿಜ್ ಸಂಸ್ಥೆಯ ಮಹಿಳಾ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಅಧಿಕಾರಿ ಮಾನಸ, ಶಾಹಿ ಸಿ.ಆರ್.ಎಸ್ ಅನುದಾನದಡಿ ಕ್ಷಿತಿಜ್ ಸಂಸ್ಥೆಯು ಗ್ರಾಮೀಣ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗ್ರಾಮೀಣ ಮಹಿಳೆಯರಿಗೆ  ಮಹಿಳಾ ಸಬಲೀಕರಣ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಪರಿಸರ ಮತ್ತು ಆರೋಗ್ಯ ಸಂರಕ್ಷಣೆಗಾಗಿ ಮುಟ್ಟಿನ ಕಪ್ ಬಗ್ಗೆ ಆರೋಗ್ಯ ಅರಿವು ಮೂಡಿಸಿ 172 ಮಹಿಳೆಯರಿಗೆ ಉಚಿತವಾಗಿ ಕಪ್ ವಿತರಿಸಿದ್ದೇವೆ. ಮಹಿಳೆಯರು ಉತ್ತಮ ಪ್ರತಿಕ್ರಿಯೆ ನೀಡಿ ಜಾಗೃತಿ ಪಡೆಯುತಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆಗೊಳಿಸುವುದೇ ಧ್ಯೇಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕ್ಷಿತಿಜ್ ಸಂಸ್ಥೆಯ ಟೆಂಝಿನ್, ನಿತ್ಯ ಮತ್ತು ಸ್ಥಳೀಯ ಗ್ರಾಮಗಳ ಮಹಿಳಾ ಪ್ರತಿನಿಧಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ