Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿವೇಕಾನಂದ ರಸ್ತೆಯಲ್ಲಿ ರಸ್ತೆಡುಬ್ಬ ನಿರ್ಮಾಣ; ರವಿಕುಮಾರ್

ಅತಿವೇಗದಲ್ಲಿ ಬರುವ ವಾಹನಗಳನನ್ನು ನಿಯಂತ್ರಿಸಿ, ಅಪಘಾತಗಳನ್ನು ತಪ್ಪಿಸುವ ಉದ್ಧೇಶದಿಂದ ಮಂಡ್ಯದ ಅಶೋಕ ನಗರದ ಬಡಾವಣೆಯಲ್ಲಿ ಹಾದು ಹೋಗುವ ವಿವೇಕಾನಂದ ರಸ್ತೆಯಲ್ಲಿ 4 ಕಡೆ ರಸ್ತೆಡುಬ್ಬಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ವಿವೇಕಾನಂದ ರಸ್ತೆಯಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇರುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ, ಹಾಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರೀಕರು ಒತ್ತಾಯಿಸಿದ್ದರು. ಈ ಬಗ್ಗೆ ನುಡಿ ಕರ್ನಾಟಕ.ಕಾಂ ನಿನ್ನೆಯಷ್ಟೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಶಾಸಕರು, ಗುರುವಾರ ಬೆಳಿಗೆ ನಗರಸಭೆಯ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ವಿವೇಕಾನಂದ ರಸ್ತೆಗೆ ಭೇಟಿ ನೀಡಿ, ಪರಿಶೀಲಿಸಿ, ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.

19ನೇ ವಾರ್ಡ್ ನಲ್ಲಿರುವ ಆನೆ ಪಾರ್ಕ್ ಅಭಿವೃದ್ಧಿ ಗೆ 30 ಲಕ್ಷ ಮೀಸಲಿಡಲಾಗಿದೆ, ಅರ್ಧಂಬರ್ಧ ಆಗಿರುವ ವಾಟರ್ ಪ್ಲಾಂಟ್ ಗಳನ್ನು ಗುತ್ತಿಗೆದಾರರು ಕೂಡಲೇ ಪೂರ್ಣಗೊಳಿಸಬೇಕು. ರೈಲ್ವೆ ನಿಲ್ದಾಣದ ಬಳಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ, ಬೀದಿದೀಪ ಆಳವಡಿಕೆ ಮಾಡುವಂತೆ ಶಾಸಕರು ಸೂಚಿಸಿದರು. ಇದೇ ಸಂದರ್ಭದಲ್ಲಿ ಆನೆ ಪಾರ್ಕಿನಲ್ಲಿ ಹೈ ಮಾಸ್ಕ್ ಲೈಟ್ ಆಳವಡಿಸಲು ಸಾರ್ವಜನಿಕರು ಮನವಿ ಸಲ್ಲಿಸಿದರು.

ರಸ್ತೆ ಬದಿ ವ್ಯಾಪಾರಿಗಳಿಗೆ ಮುಂದಿನ ದಿನಗಳಲ್ಲಿ ಮಂಡ್ಯ ನಗರದ ಆಯ್ದ ಜಾಗಗಳಲ್ಲಿ ವ್ಯಾಪಾರ ಮಾಡಲು ಅವಕಾಶ, ಒಂದೇ ಸೂರಿ ನಡಿ ತರಲು ಚಿಂತನೆ ಇದೆ ಎಂದು ಶಾಸಕರು, ನಗರಾಭಿವೃದ್ದಿಗೆ ಅಮೃತ್ ಯೋಜನೆಯಡಿ ಬಂದ ₹10 ಕೋಟಿಗಳ ಪೈಕಿ, ₹7.50 ಕೋಟಿಗಳನ್ನು ಗುತ್ತಲು ಕೆರೆ ಅಭಿವೃದ್ದಿಗೆ ಬಳಸಿಕೊಳ್ಳಲಾಗುತ್ತಿದೆ, ಅಲ್ಲಿ ವಾಕ್ ಪಾಥ್ ನಿರ್ಮಾಣ, ಕೊಳಚೆ ನೀರು ಕೆರೆಗೆ ನೀರು ಸೇರದಂತೆ ಮಾಡಲು ಕಾಮಗಾರಿ, ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಮಂಡ್ಯನಗರದ ಗಾಂಧಿ ಪಾರ್ಕ್ ಅನ್ನು1.80 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳಿಸಿ ಮಕ್ಕಳ ಆಟೋಟ ಮತ್ತು ಮನರಂಜನೆಗೆ ತಕ್ಕಂತೆ ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಜಿ.ವಿ.ನಾಗರಾಜು, ಸೊಸೈಟಿ ಚಂದ್ರು, ಶಿವಪ್ರಕಾಶ್ ಬಾಬು, ಎಂ‌.ಎಲ್.ವೆಂಕಟೇಶ್, ಮಂಡ್ಯಪಾಲಿ ಕ್ಲಿನಿಕ್ ನ ಡಿ. ಮಂಜುನಾಥ್, ಪಟೇಲ್ ಶ್ರೀನಿವಾಸ್, ಅಧಿಕಾರಿಗಳಾದ ರಾಜೇಗೌಡ, ಇಂಜಿನಿಯರ್ ರವಿಕುಮಾರ್, ಟ್ರಾಫಿಕ್ ಇನ್ಸಪೆಕ್ಟರ್ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ