ಅಸ್ಪೃಶ್ಯತೆ ಪ್ರಕರಣ ನಡೆದು ಒಂದು ವಾರ ಕಳೆದರೂ ಆರೋಪಿ ಜೊತೆ ಶಾಮೀಲಾಗಿ ಬಂಧಿಸದೇ ಕಾನೂನು ವಿರೋಧಿ ಧೋರಣೆ ಅನುಸರಿಸರುವ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡ ಶಿವಣ್ಣ ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಜು. 21ರಂದು ಶ್ರೀರಂಗಪಟ್ಟಣ ತಾಲೂಕು ನೇರಲಕೆರೆ ಗ್ರಾಮದಲ್ಲಿ ಮುದಿಯನ ನಂಜಯ್ಯ ಎಂಬುವರವ ದಲಿತ ವ್ಯಕ್ತಿಗೆ ಎಲ್ಲರಂತೆ ಸಮಾನವಾಗಿ ಊಟ, ತಿಂಡಿ ನೀಡದೆ ಅಪಮಾನ ಎಸಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿದ್ದಾರೆ ದೂರಿದರು.
ಈ ಬಗ್ಗೆ ಅರಕೆರೆ ಪೊಲೀಸರಿಗೆ ದೂರು ನೀಡಿದರೆ, ಸ್ಥಳೀಯ ಪಂಚಾಯಿತಿ ಮುಖಂಡರನ್ನು ಕರೆಸಿ ರಾಜೀ ಸಂಧಾನ ಮಾಡಿಸಲು ಯತ್ನಿಸಿದ್ದಾರೆ. ಒತ್ತಡ ಹೆಚ್ಚಾದ ನಂತರ ಜೂ.27ರಂದು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಈವರೆವಿಗೂ ಆರೋಪಿಯನ್ನು ಬಂಧಿಸುವ ಕ್ರಮ ಕೈಗೊಂಡಿಲ್ಲ. ಅಸ್ಪಶ್ಯತಾ ಆಚರಣೆ ಇನ್ನೂ ಜಾರಿಯಲ್ಲಿದ್ದರೂ ಅದಕ್ಕೆ ಕಾನೂನಿನ ಮೂಲಕ ಅಧಿಕಾರಿಗಳೇ ಬೆಂಬಲವಾಗಿ ನಿಲುತ್ತಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶೀಘ್ರ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮುಖಂಡರಾದ ರಮಾನಂದ, ಎನ್.ಸಿದ್ದರಾಜು, ದ್ಯಾವರಸಯ್ಯ ಉಪಸ್ಥಿತರಿದ್ದರು.




