Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಟ್ರ್ಯಾಕ್ಟರ್ ನಿಂದ ಜಾರಿ ಬಿದ್ದ ಕಬ್ಬು; ತಪ್ಪಿದ ಅನಾಹುತ

ಡಬಲ್ ಟ್ರೇಲರ್ ಗಳಲ್ಲಿ ಸಕ್ಕರೆ ಕಾರ್ಖಾನೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಕಬ್ಬು ಕುಸಿದು ಬಿದ್ದು, ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಮಂಡ್ಯನಗರ ಈಸ್ಟ್ ಪೊಲೀಸ್ ಠಾಣೆ ಎದುರು ಶನಿವಾರ ಸಂಜೆ 4 ಗಂಟೆ ಸಮಯದಲ್ಲಿ ನಡೆಯಿತು.

ಕಬ್ಬು ತುಂಬಿಕೊಂಡು ಹೊರಟ್ಟಿದ್ದ ಎರಡು ಟ್ರೇಲರ್ ಗಳ ಪೈಕಿ ಒಂದು ಟ್ರೇಲರ್ ನ ಕಬ್ಬು ಇದ್ದಕ್ಕಿದಂತೆ ಕುಸಿದು ಬಿದ್ದಿತು, ಆ ಸಮಯದಲ್ಲಿ ಸಮೀಪದಲ್ಲಿ ಯಾರು ಬರುತ್ತಿರಲಿಲ್ಲವಾದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಸಕ್ಕರೆ ಫ್ಯಾಕ್ಟರಿಗೆ ತೆರಳು ಕಬ್ಬಿನ ಟ್ರ್ಯಾಕ್ಟರ್ ಗಳು ಏಕಕಾಲದಲ್ಲಿ ಎರಡೆರಡು ಟ್ರೇಲರ್ ಗಳ ಮೂಲಕ ಕಬ್ಬುಗಳನ್ನು ಸಾಗಿಸುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿದೆ, ಆದ್ದರಿಂದ ಒಂದೇ ಟ್ರೇಲರ್ ನಲ್ಲಿ ಕಬ್ಬು ಸಾಗಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿರ್ಬಂಧ ಹೇರಬೇಕೆಂದು ಸ್ಥಳೀಯ ನಾಗರೀಕರು ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!