Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟ| ಮಳವಳ್ಳಿಯಲ್ಲಿ ರೈತರಿಂದ ಹೆದ್ದಾರಿ ತಡೆ

ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂಬ ಸುಪ್ರೀಂಕೊರ್ಟ್ ಅದೇಶವನ್ನು ವಿರೋಧಿಸಿ ರೈತರು ಹಾಗೂ ರೈತ ಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ತಮಿಳುನಾಡು ಸರ್ಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಬರಗಾಲದ ಪ್ರಸ್ತುತ ಸಂದರ್ಭದಲ್ಲಿ ತಮೀಳು ನಾಡಿಗೆ ನೀರನ್ನು ಹರಿಸಬಾರದೆಂದು ಆಗ್ರಹಿಸಿದರು.

ರೈತಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೇ ಕೆಆರ್‌ಎಸ್ ಅಣೆಕಟ್ಟೆಗೆ ಸರಿಯಾದ ಪ್ರಮಾಣದಲ್ಲಿ ನೀರು ಬಾರದೇ ಹಿನ್ನೆಯಲ್ಲಿ ಕುಡಿಯುವ ನೀರಿಗೂ ತೊಂದರೆ ಅನುಭವಿಸುತ್ತಿರುವ ವೇಳೆ ಸುಪ್ರೀಂಕೊರ್ಟ್ 5 ಸಾವಿರ ಕ್ಯೂಸೆಕ್ ನೀರನ್ನು ತಮೀಳುನಾಡಿಗೆ ಬಿಡಬೇಕೆಂಬ ಅದೇಶ ನೀಡಿರುವುದು ಖಂಡನೀಯ, ವಾಸ್ತವವನ್ನು ಹರಿತು ಅದೇಶ ಮಾಡದೇ ಎರಡು ರಾಜ್ಯದ ಜನರಲ್ಲಿ ಗೊಂದಲ ಸೃಷ್ಠಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

1924ರ ನೀರು ಹಂಚಿಕೆ ಒಪ್ಪಂದದ ಅದೇಶವನ್ನು ಮುಂದಿಟ್ಟುಕೊAಡು ತಮಿಳುನಾಡು ಸರ್ಕಾರ ಕರ್ನಾರದ ಮೇಲೆ ಸವಾರಿ ಮಾಡುತ್ತಿದೆ, ರಾಜಕೀಯ ಪಕ್ಷಗಳು ಕೂಡ ಸಮಸ್ಯೆಗಳನ್ನು ಬಗೆಹರಿಸದೇ ಮುಂದುವರೆಸಿಕೊಂಡು ಬರುತ್ತಿರುವುದರಿಂದ ಇಲ್ಲಿನ ರೈತರು ಸಂಕಷ್ಟ ಪಡುವಂತಾಗಿದೆ ಎಂದು ಕಿಡಿಕಾರಿದರು.

ಸುಪ್ರೀಂ ಕೋರ್ಟ್ ಅದೇಶದಂತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಟ್ಟರೇ ಕೆಆರ್‌ಎಸ್ ಡ್ಯಾಂನಲ್ಲಿ ನೀರಿಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರಿತಪ್ಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದರಿಂದ ರಾಜ್ಯ ಸರ್ಕಾರ ಸುಪ್ರಿಂ ಅದೇಶವನ್ನು ಪಾಲೀಸಬಾರದೆಂದು ಹೇಳಿದರು.

ರೈತಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜು ಮಾತನಾಡಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸರ್ಕಾರ ಮುಂದಾಗಬಾರದು, ರಾಜ್ಯದ ರೈತರ ಹಿತವನ್ನು ಮರೆತು ನೀರು ಬಿಡುವುದನ್ನು ಕಂಡು ಬಂದರೇ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಮಹೇಶ್, ಗಿರೀಶ್, ಪುಟ್ಟಸ್ವಾಮಿ, ಕೆಂಪೇಗೌಡ, ಚೌಡಯ್ಯ, ಕೃಷ್ಣ, ಪುನೀತ್, ಚೌಡೇಗೌಡ, ಭೂಮಿಗೌಡ, ಚಿಕ್ಕವೀರಪ್ಪ, ಶ್ರೀನಿಗೌಡ, ಮಾಯಿಗಯ್ಯ, ಗಾಡಿ ಹೊನ್ನಯ್ಯನ ಚೌಡಯ್ಯ ಸೇರಿದಂತೆ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ