Friday, November 20, 2026

ಪ್ರಾಯೋಗಿಕ ಆವೃತ್ತಿ

ಜನರ ಸಮಸ್ಯೆ ಪರಿಹರಿಸಿದರೆ ಜನತಾ ದರ್ಶನ ಯಶಸ್ವಿ: ಚಲುವರಾಯಸ್ವಾಮಿ

ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳನ್ನು ‌ಆದ್ಯತೆ ಮೇಲೆ ಪರಿಗಣಿಸಿ ಪರಿಹಾರ ಒದಗಿಸಿ ಜನತಾ ದರ್ಶನವನ್ನು ಯಶಸ್ವಿಗೊಳಿಸಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜನತಾ ದರ್ಶನದ ನಂತರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಸರ್ಕಾರದ ನಿಯಮಗಳಡಿ ಪರಿಹಾರ ನೀಡಲು ಸಾಧ್ಯವಿಲ್ಲದಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅರ್ಜಿದಾರರನ್ನು ಭೇಟಿ ಮಾಡಿ ಸಕಾರಣ ನೀಡಿ ಮನವರಿಕೆ ಮಾಡಿಕೊಟ್ಟು ಅರ್ಜಿ ವಿಲೇವಾರಿ ಮಾಡಿ ಎಂದರು.

nudikarnataka.com

ಬಗರ್ ಹುಕುಂ, ಬರ ಪರಿಹಾರ, ಕುಡಿಯುವ ನೀರು, ಹಾಸ್ಟೆಲ್ ಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಇಲಾಖೆ ಕಾರ್ಯನಿರ್ವಹಣೆಯ ಬಗ್ಗೆ ನಿರ್ದೇಶನ ನೀಡಿದರು. ಸಾವಿರಾರು ಎಕರೆಗೆ ನಕಲಿ ದಾಖಲಾತಿಗಳನ್ನು ತೊರೆಕಾಡನಳ್ಳಿ ಹಾಗೂ ಮಳವಳ್ಳಿಯಲ್ಲಿ ಅಕ್ರಮ ಖಾತೆ ಮಾಡಿಕೊಂಡಿದ್ದಾರೆ. ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಿಳಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ಕಾರಿ ಜಾಗ, ಕೆರೆ, ಕಟ್ಟೆಗಳಿಗೆ ಸಂಬಂಧಿಸಿದಂತೆ ನಿಖರ ದಾಖಲಾತಿಗಳನ್ನು ಇಟ್ಟಿಕೊಳ್ಳಬೇಕು. ನ್ಯಾಯಾಲಯದ ವ್ಯಾಪ್ತಿಯಲ್ಲಿ ವ್ಯಜ್ಯಗಳು ಬಂದಾಗ ದಾಖಲಾತಿಗಳನ್ನು ಒದಗಿಸಬೇಕು. ಸರ್ಕಾರ ಆಸ್ತಿ ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಜನತಾ ದರ್ಶನ ತಿಂಗಳಲ್ಲಿ ಎರಡು ಬಾರಿ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ. ಜಾಫರ್ ಮಾತನಾಡಿ, ಜನತಾ ದರ್ಶನ ತಿಂಗಳಲ್ಲಿ ಎರಡು ಬಾರಿ ಜಿಲ್ಲೆಯಲ್ಲಿ ನಡೆಯಲಿದೆ. ಜನತಾ ದರ್ಶನದಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಅರ್ಜಿದಾರರಿಗೆ ಹಿಂಬರಹ ನೀಡಿ ಎಂದರು.

ಮಳವಳ್ಳಿಯಲ್ಲಿ ಇಂದು ಜನತಾ ದರ್ಶನ ನಡೆದಿದ್ದು, ಇನ್ನೂ ಮುಂದಿನ ಮೂರು ತಿಂಗಳ ನಂತರ ಮಳವಳ್ಳಿಯಲ್ಲೇ ನಡೆಯಲಿದೆ,ತಾವು ಸರಿಯಾಗಿ ಉತ್ತರ ನೀಡಿ ಪರಿಹರಿಸದಿದ್ದರೆ ಜನರೇ ನಿಮ್ಮನ್ನು ಪ್ರಶ್ನಿಸಲಿದ್ದರೆ ಎಂದರು.

348 ಅರ್ಜಿಗಳ ಸ್ವೀಕಾರ

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಇಂದು 348 ಅರ್ಜಿ ಸ್ವೀಕರವಾಗಿದ್ದು, ಅದರಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಗೆ 204 ಅರ್ಜಿ ಬರಲಿದೆ. ಸಂಬಂಧಿಸಿದ ಇಲಾಖೆಗೆ ಅರ್ಜಿ ವರ್ಗಾಯಿಸಲಾಗುವುದು, ನಿಯಮಾನುಸಾರ ವಿಲೇವಾರಿ ಮಾಡಿ ಎಂದರು.

ಈಗಾಗಲೇ ಪೌತಿ ಖಾತಾ ಆಂದೋಲನವನ್ನು ‌ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಪೌತಿ ಖಾತೆಗೆ ‌ಸಂಬಂಧಿಸುದಂತೆ ಅರ್ಜಿ ಬಂದಿದ್ದರೆ ಅಗತ್ಯ ದಾಖಲಾತಿ ಪಡೆದುಕೊಂಡು ವಿಲೇವಾರಿ ಮಾಡಿ. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಪ್ರಾರಂಭವಾಗಿದೆ ಶೇ 22 ರಷ್ಟು ಆಗಿರುತ್ತದೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅವರು ಸಮನ್ವಯದಿಂದ ಕಾರ್ಯನಿರ್ವಹಿಸಿ ಬರ ಹಾಗೂ ಇನ್ನಿತರ ಪರಿಹಾರ ನೀಡಲು ಬೆಳೆ ಸಮೀಕ್ಷೆ ಅವಶ್ಯಕವಾಗಿರುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಇಂದು ಮಳವಳ್ಳಿ ತಾಲ್ಲೂಕಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಒಟ್ಟು 348 ಅರ್ಜಿಗಳು ಸ್ವೀಕೃತಗೊಂಡವು.

ಸ್ವೀಕೃತಗೊಂಡ ಅರ್ಜಿಗಳ ಇಲಾಖೆವಾರು ವಿವರ 

  • ಕಂದಾಯ ಇಲಾಖೆ-203
  • ಕೃಷಿ ಇಲಾಖೆ -4
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ-31
  • ಚಾ.ವಿ.ಸ.ನಿ.ನಿ(ಚೆಸ್ಕಾಂ)-16
  • ಪುರಸಭೆ- 31
  • ಸಮಾಜ ಕಲ್ಯಾಣ ಇಲಾಖೆ -10
  • ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆ- 9
  • ಲೋಕೋಪಯೋಗಿ ಇಲಾಖೆ-1
  • ಆಹಾರ ಇಲಾಖೆ -4
  • ಆರೋಗ್ಯ ಇಲಾಖೆ-9
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- 5
  • ಕಾವೇರಿ ನೀರಾವರಿ ನಿಗಮ- 6,
  • ಭೂಮಾಪನ ಇಲಾಖೆ -4,
  • ಶಿಕ್ಷಣ ಇಲಾಖೆ -10
  • ಮೀನುಗಾರಿಕೆ ಇಲಾಖೆ -1
  • ಒಟ್ಟು 348 ಅರ್ಜಿ ಸ್ವೀಕೃತಗೊಂಡವು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ