Friday, November 20, 2026

ಪ್ರಾಯೋಗಿಕ ಆವೃತ್ತಿ

ಬ್ಯಾಂಕ್ ಆಫ್ ಬರೋಡ ಲೀಡ್ ಬ್ಯಾಂಕ್: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಮಂಡ್ಯ ನಗರದಲ್ಲಿ ಬ್ಯಾಂಕ್ ಆಫ್ ಬರೋಡ ಲೀಡ್ ಬ್ಯಾಂಕ್ ವತಿಯಿಂದ 2023-24ನೇ ಸಾಲಿನ ಮೊದಲ ತ್ರೈಮಾಸಿಕ ಜೂನ್ 2023 ರ ಪ್ರಗತಿ ಪರಿಶೀಲನ ಸಭೆ ಹಾಗೂ ಸಲಹಾ ಸಮಿತಿ ಸಭೆಯನ್ನು ಹಮ್ಮಿಕೊಳ್ಳ ಲಾಗಿತ್ತು. ಈ ಪ್ರಗತಿ ಪರಿಶೀಲನ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್ ಅಧ್ಯಕ್ಷತೆ ವಹಿಸಿದರು.

ಪರಿಶೀಲನಾ ಸಭೆಯಲ್ಲಿ ಲೀಡ್ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಅರುಣ್ ಕುಮಾರ್ ಮಾತನಾಡಿ ಮಂಡ್ಯ ಜಿಲ್ಲೆಯು ಮೊದಲ ತ್ರೈಮಾಸಿಕ ಹಂತದಲ್ಲಿ ಜೂನ್ ಅಂತ್ಯಕ್ಕೆ ಶೇಕಡ 146% ಸಾಧನೆಯನ್ನು ಮಾಡಲಾಗಿದ್ದು, ಕೃಷಿ ರಂಗಕ್ಕೆ 2316.45 ಕೋಟಿ ರೂ ಸಾಲ ನೀಡಿ, ಶೇಕಡ 139% ಗುರಿ ಸಾಧಿಸಿದ್ದು ಕೈಗಾರಿಕಾ ರಂಗಕ್ಕೆ 436.21 ಕೋಟಿ ರೂ ಸಾಲ ನೀಡಲಾಗಿದೆ ಎಂದು ತಿಳಿಸಿದರು, ಅಲ್ಲದೇ ಇದೇ ಪ್ರಗತಿಯು ಮುಂದುವರಿಸಬೇಕೆಂದು ಕೋರಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್ ಅವರು ಬ್ಯಾಂಕಿನ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಆರ್ಥಿಕ ಪ್ರಗತಿಗಾಗಿ ಹೆಚ್ಚಿನ ಸಾಲ ಸೌಲಭ್ಯವನ್ನು ನೀಡಲು ಸೂಚಿಸಿದರು. ಪ್ರತಿ ಬ್ಯಾಂಕಿನವರು ಸರ್ಕಾರದ ಇಲಾಖೆಯಿಂದ ಬರುವಂತಹ ಸಾಲದ ಅರ್ಜಿಯನ್ನು ಕೂಡಲೇ ನಿಗದಿತಾವಧಿಯಲ್ಲಿ ಸಾಲ ಮಂಜೂರು ಮಾಡಲು ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ನಬಾರ್ಡ್ ಮುಖ್ಯ ವ್ಯವಸ್ಥಾಪಕರಾದ  ಹರ್ಷಿತಾ ಕೃಷಿಗೆ ಸಂಬಂಧಿಸಿದಂತೆ ಮಾತನಾಡಿ, ಜಿಲ್ಲೆಯಲ್ಲಿ ಹರ್ ಗರ್ ಕೆಸಿಸಿ ಅಭಿಯಾನವು 01.10.2023 ರಿಂದ 31.12.2023 ರವರೆಗೆ ಆಯೋಜಿಸಲಾಗಿದ್ದು ಹೆಚ್ಚಿನ ರೈತರಿಗೆ ಸಾಲ ಸೌಲಭ್ಯವನ್ನು ಬ್ಯಾಂಕಿನವರು ನೀಡುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಆರ್ ಬಿ ಐ ನ ಮ್ಯಾನೇಜರ್ ವಾಸಂತಿ ಅವರು ಆನ್ಲೈನ್ ಮೂಲಕ ಭಾಗಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಂಜೀವಪ್ಪ, ಬ್ಯಾಂಕ್ ಆಫ್ ಬರೋಡದ ಉಪ ಕ್ಷೇತ್ರಿಯ ಪ್ರಬಂಧಕ ಸುಹಾಸ್, ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗಿಯಾಗಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ