ನಾಳೆಯಿಂದ ದೇವಾಲಯಗಳಲ್ಲಿ ಸುಪ್ರಭಾತ,ಹನುಮಾನ್ ಚಾಲೀಸಾ ಪಠಣ ಅಭಿಯಾನ ನಡೆಯಲಿದೆ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಮಂಡ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಾವಿರ ದೇವಾಲಯಗಳ ಅರ್ಚಕರು, ಟ್ರಸ್ಟ್‌ನವರು ಬೆಳಗಿನ ಜಾವ ಭಕ್ತಿ ಗೀತೆ, ಹನುಮಾನ್ ಚಾಲೀಸಾ ಹಾಕಲು ಸಂತೋಷದಿಂದ ಒಪ್ಪಿಗೆ ನೀಡಿದ್ದಾರೆ ಎಂದರು.
ಸರ್ಕಾರ ಅಭಿಯಾನ ಹತ್ತಿಕ್ಕುವ ಪ್ರಯತ್ನ ಮಾಡ್ತಿದೆ. ನಾವು ಸಂಪರ್ಕಿಸಿದ ದೇವಾಲಯಕ್ಕೆ ಹೋಗಿ ಹೆದರಿಸುತ್ತಿದ್ದಾರೆ. ಈ ದಾದಗಿರಿ ನಡೆಯಲ್ಲ, ಮುಸ್ಲಿಮರ ಮೈಕಿಗೆ ನಿಮ್ಮ ದಾದಾಗಿರಿ ತೋರಿಸಿ ಎಂದು ಕಿಡಿಕಾರಿದರು.
ಪೊಲೀಸರಿಂದ ದೇವಾಲಯಗಳನ್ನು ಹೆದರಿಸುವ ಕೆಲಸ ಸರಿಯಲ್ಲ.ಯಾವುದೇ ಗದ್ದಲವಿಲ್ಲದೆ ಶಾಂತ ರೀತಿಯಲ್ಲಿ ಅಭಿಯಾನ ಮಾಡುತ್ತೇವೆ. ಗಲಭೆ,ಅಶಾಂತಿ ಮಸೀದಿ ಮೈಕ್ ಮೂಲಕ ಆಗುತ್ತಿದೆ. ಹಿಂದೂಗಳಿಂದ ಗೆದ್ದ ಯೋಗಿ ಆದಿತ್ಯನಾಥ್ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ನಮ್ಮ ರಾಜ್ಯದಲ್ಲಿ ಯಾಕೆ ಆ ಕೆಲಸ ಆಗುತ್ತಿಲ್ಲ. ಯೋಗಿ ರೀತಿ ಗಟ್ಸ್ ಬೊಮ್ಮಾಯಿ,ಆರಗ ಜ್ಞಾನೇಂದ್ರ ಯಾಕೆ ತೋರಿಸುತ್ತಿಲ್ಲ ಎಂದರು.
ಬುರ್ಕಾ ಹಾಕೊಂಡು ಓಡಾಡಿದ್ರು ಬಿಜೆಪಿಗೆ ಒಂದು ಮುಸ್ಲಿಂ ಓಟು ಬರಲ್ಲ. ಯಾಕೆ ಇವರು ಮುಸ್ಲಿಮರ ಓಲೈಕೆ ಮಾಡಬೇಕು. ನಿಮಗೆ ಆಗದಿದ್ರೆ ಹೇಳಿ ನಾವು ಮೈಕ್ ಬಂದ್ ಮಾಡುತ್ತೇವೆ. ನಾಳೆಯ ಅಭಿಯಾನ ತಡೆಯಲು ಬಂದರೆ ಸಂಘರ್ಷ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.