ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ನಲ್ಲಿರುವ BGS ಆಸ್ಪತ್ರೆಯ ಮುಂಭಾಗ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ಕು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಹಾಸನದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್(ಕೆಎ-57 ಎಫ್-4474) ಬಿಜಿಎಸ್ ಆಸ್ಪತ್ರೆ ಬಳಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದಾಗ ಸ್ವಿಫ್ಟ್ ಕಾರು (KA-02-MM-1802) ವೇಗವಾಗಿ ಬಂದು ಹಿಂದಿನಿಂದ ಬಸ್ ಗೆ ಢಿಕ್ಕಿ ಹೊಡೆದಿದೆ.ಢಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಮಿತಾಬೆಂಡಿಗನಹಳ್ಳಿ,ರಾಜಸ್ತಾನದ ಪಂಕಜ್ ಶರ್ಮಾ,ಹೊಸಕೋಟೆಯ ವಂಶಿಕೃಷ್ಣ,ಧಾರವಾಡದ ರಘುನಾಥ್ ಭಜಂತ್ರಿ ಮೃತಪಟ್ಟವರು.ಮೃತರಲ್ಲಿ ನಮಿತ ಹಾಗೂ ರಘುನಾಥ್ ಭಜಂತ್ರಿ ಅಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ,ಪಂಕಜ್ ಶರ್ಮಾ ಇನ್ಫೋಸಿಸ್ ಕಂಪನಿಯ ಉದ್ಯೋಗಿ ಎನ್ನಲಾಗಿದೆ.
ಕಾರ್ ಬಸ್ ಗೆ ಹಿಂದಿನಿಂದ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ಕು ಮಂದಿಯ ಮೃತ ದೇಹಗಳು ಕಾರಿಗೆ ಅಂಟಿಕೊಂಡಿತ್ತು.ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬೆಳ್ಳೂರು ಠಾಣೆ ಪೋಲೀಸರು
ನಾಲ್ಕು ಮಂದಿಯ ಮೃತದೇಹಗಳನ್ನು ಸಾರ್ವಜನಿಕರ ಸಹಾಯದಿಂದ ಹೊರತೆಗೆದು ಬಿಜಿಎಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.ಈ ಬಗ್ಗೆ ಬೆಳ್ಳೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




