ಮಂಡ್ಯನಗರದ ಕಲ್ಲಹಳ್ಳಿಯಲ್ಲಿ ಚಿತ್ರ ಕಲಾವಿದ ಸೋಮವರದ ಅವರ ಮಗಳು 7 ವರ್ಷದ ‘ಸೃಜನಿ’ಯ ಏಕವ್ಯಕ್ತಿ ಕಲಾಪ್ರದರ್ಶನವನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪುಟ್ಟ ಚಿತ್ರಕಲಾವಿದೆಯ ಚಿತ್ರಕೃಷಿಯನ್ನು ಮೆಚ್ಚಿ ಪ್ರೋತ್ಸಾಹಿಸಿದರು.
ಮುಂಜಾನೆ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ಅವರೊಂದಿಗೆ ಕಲ್ಲಹಳ್ಳಿಯ “ಪುಟ್ಟಹೆಜ್ಜೆ” ನಿಲಯಕ್ಕೆ ಹಾಜರಾದ ಅವರು, ಸೃಜನಿಯ ಚಿತ್ರಕಲೆಯನ್ನು ವೀಕ್ಷಿಸಿ ಮೆಚ್ಚುಗೆಯ ಮಾತನಾಡಿದರು.

ಈ ಸಂದರ್ಭದಲ್ಲಿ ಡ್ರಾಯಿಂಗ್ ಪೆನ್ ಹಿಡಿದು ಚಿಟ್ಟೆಯ ಚಿತ್ತಾರವನ್ನು ರಚಿಸುವ ಮೂಲಕ ತಮ್ಮ ಚಿತ್ರಕಲೆಯನ್ನು ಅಭಿವ್ಯಕ್ತಿಗೊಳಿಸಿದರು. ಈ ಸಂದರ್ಭದಲ್ಲಿ ಚಿತ್ರಕಲಾವಿದ ಸೋಮುವರದ ಹಾಗೂ ರಾಜೇಂದ್ರ ಸಿಂಗ್ ಬಾಬು ಉಪಸ್ಥಿತರಿದ್ದರು.




