Saturday, November 21, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಅಂಬೇಡ್ಕರ್-ಬಾಬೂಜಿ ಭವನದ ಕಾಮಗಾರಿ ಪರಿಶೀಲನೆ

ಕೆ ಆರ್ ಪೇಟೆ ಪಟ್ಟಣದ ಪುರಸಭೆಯ ಪಕ್ಕದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಸಮುದಾಯ ಭವನ ಹಾಗೂ ಬಾಬು ಜಗಜೀವನರಾಂ ಸಮುದಾಯ ಭವನದ ಕಾಮಗಾರಿಯನ್ನು ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಕ್ಷೇತ್ರದ ಶಾಸಕ ಹೆಚ್ ಟಿ ಮಂಜು ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ‌ ಉಪ‌ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ  ಅವರು ಅವಳಿ ರತ್ನಗಳು, ನಮಗೆ ಅವರ ಬಗ್ಗೆ ಅಪಾರವಾದ ಗೌರವವಿದೆ. ಇಂತಹ ಮಹಾನಾಯಕರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತಿರುವುದು ಬಹಳ ಸಂತಸದ ಸಂಗತಿ. ಕಟ್ಟಡಕ್ಕೆ ಕ್ಯೂರಿಂಗ್ ನ್ನು ನೀಟಾಗಿ ಮಾಡಬೇಕು. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಕಟ್ಟಡವನ್ನು ನಿರ್ಮಾಣ ಮಾಡುವ ಕ್ರೈಸ್ ಸಂಸ್ಥೆಯವರಿಗೆ ತಾಕೀತು ಮಾಡಿದರು. ಕಟ್ಟಡದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜೀ ಆಗುವ ಪ್ರಶ್ನೆಯೇ ಇಲ್ಲ ಎಂದು ಗುತ್ತಿಗೆದಾರರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ದಿವಾಕರ್, ದಲಿತ ಸಂಘಟನೆಗಳ ಹಿರಿಯ ಮುಖಂಡ ಸಿಂಧಘಟ್ಟ ಸೋಮಸುಂದರ್, ಪುರಸಭಾ ಸದಸ್ಯ ಗಿರೀಶ್, ಛಲವಾದಿ ಮಹಾಸಭಾದ ಅಧ್ಯಕ್ಷ ಊಚನಹಳ್ಳಿ ನಟರಾಜು, ಎಸ್ಸಿ ಘಟಕದ ಅಧ್ಯಕ್ಷ ಹರಿಹರಪುರ ನರಸಿಂಹ, ಕ್ರೈಸ್ ಎ ಇ ಇ ತಿಮ್ಮಸ್ವಾಮಿ,
ಪಿಎಂ‌ಸಿ ಟೀಂ‌ ಲೀಡರ್ ವೇದಮೂರ್ತಿ, ಕಂಟ್ರಾಕ್ಟರ್ ಆನಂದ್, ಮಹದೇವೇಗೌಡ,ದಲಿತ ಯುವ ಮುಖಂಡ
ಚನ್ನಕೃಷ್ಣ, ರಾಮು, ರಾಯಸಮುದ್ರ ಉಮೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ