ಭಾರತ ಸಂವಿಧಾನವು ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳನ್ನ ನೀಡಿದ್ದು ಅವುಗಳನ್ನ ಕಾನೂನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ಸಾಮರಸ್ಯದ ಜೀವನ ನಡೆಸಬೇಕೆಂದು ಜೆ.ಎಂ. ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಂಜೇಗೌಡ ಎಂ.ಸಿ. ಹೇಳಿದರು.
ಮದ್ದೂರು ತಾಲ್ಲೂಕಿನ ಬೆಳತೂರು ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಟಾಟಿಸಿ ಅವರು ಮಾತನಾಡಿದರು.
ಭಾರತದ ಸವಿಧಾನದ ಪ್ರಕಾರ ಪ್ರಜಾಪ್ರಭುತ್ವದ ಸುಗಮ ಕಾರ್ಯ ನಿರ್ವಹಣೆಗೆ ಮೂಲಭೂತ ಹಕ್ಕುಗಳು ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಸಮಾಜದ ಕಟ್ಟ ಕಡೇಯ ಹಾಗೂ ದರ್ಬಲರಿಗೂ ನ್ಯಾಯಾ ಸಿಗಬೇಕೆಂಬ ಕಾರಣದಿಂದ ಕಾನೂನು ಸೇವಾ ಸಮಿತಿಯನ್ನ ರಚಿಸಿದ್ದು ಅದರ ಮೂಲಕ ಉಚಿತವಾಗಿ ಕಾನೂನಿನ ಸಹಾಯ ಪಡೆಯಬಹುದು ಎಂದ ಅವರು ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನ ಬಗೆಹರಿಸಿಕೊಂಡು ಸಂತೃಪ್ತಿಯ ಜೀವನ ನಡೆಸುವುದಕ್ಕೆ ಪ್ರತಿಯೊಬ್ಬರು ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಕಿರಿಯ ನ್ಯಾಯಾಧೀಶರಾದ ನಳಿನಿ ಎಸ್.ಸಿ ಮಾತನಾಡಿ ಭಾರತೀಯ ಸಂವಿಧಾನದಲ್ಲಿ ಲಿಂಗ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದ ಅವರು ಹೆಣ್ಣು ಮಕ್ಕಳು ಸಂವಿಧಾನ ಬದ್ದವಾಗಿ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನ ಸದೂಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣವನ್ನ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಕಿವಿಮಾತು ಹೇಳಿದರು
ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಶಿಕ್ಷಣ ಹಾಗೂ ಅರಿವಿನ ಕೊರತೆಯಿಂದಾಗಿ ಮೌಢ್ಯಕ್ಕೆ ಜೊತು ಬಿದ್ದು ಪೋಷಕರ ಒತ್ತಾಸೆಗೆ ಬಾಲ್ಯ ವಿವಾಹಕ್ಕೆ ಒಳಗಾಗವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು ಶಿಕ್ಷಣ ಸಂಸ್ಧೆಗಳು ಹಾಗೂ ಶಿಕ್ಷಕರು, ಸಂಘ ಸಂಸ್ಧೆಗಳು ಇಂತಹ ಕಾನೂನಿನ ಬಗ್ಗೆ ಅರಿವು ಮೂಡಿಸುವಂತಹ ಶಿಬಿರಗಳನ್ನ ಆಯೋಜಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಎಂ.ಹೆಚ್. ಚನ್ನೇಗೌಡ ವಿದ್ಯಾಸಂಸ್ಧೆಯ ಅಧ್ಯಕ್ಷ ಸಿ. ಅಪೂರ್ವಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲದ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ, ಕಾರ್ಯದರ್ಶಿ ಸುಮಂತ್, ಗ್ರಾಂ.ಪಂ.ಸದಸ್ಯರಾದ ಡಿ.ನಳಿನ ಕುಮಾರಿ, ಅನಂತರಾಮು, ಮುಖಂಡರಾದ ಬಿ.ಎನ್. ಕೃಷ್ಣ, ಸಿದ್ದರಾಮು ಎಂ.ಶಿವರಾಜು ಪ್ರಾಂಶುಪಾಲರಾದ ಯು.ಎಸ್.ಶಿವಕುಮಾರ್ ಶಿಬಿರಾಧಿಕಾರಿಗಳಾದ ಹೆಚ್.ಎಸ್. ಪಂಚಲಿಂಗೇಗೌಡ ಹಾಗೂ ಸಹ ಶಿಬಿರಾರ್ಥಿಗಳಾದ ರೇವಣ್ಣ ಎನ್, ಜಯವರ್ಧನ್ ಸಿ, ಜಿ.ಸುರೇಂದ್ರ, ಬಿ.ಸಿ.ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.




