Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಾಹಳ್ಳಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘ ಅತ್ಯುತ್ತಮ- ಸುಕನ್ಯರಾಜು

ಶುದ್ದ ಹಾಲು ಪೂರೈಕೆಯಿಂದ ಸಾಹಳ್ಳಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘವು ಅತ್ಯುತ್ತಮ ಸಹಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷೆ ಎಸ್ ಸುಕನ್ಯರಾಜು ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಸಾಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ವತಿಯಿಂದ ರೈತರಿಗೆ ಬೇಕಾದ ಪಶುಆಹಾರ, ಮ್ಯಾಟ್, ಮೇವು ಕತ್ತರಿಸುವ ಯಂತ್ರ ಸೇರಿದಂತೆ ಹೈನುಗಾರಿಕೆಗೆ ಸಹಾಯವಾಗುವಂತಹ ಸೌಲಭ್ಯಗಳನ್ನು ನಿರಂತರವಾಗಿ ನೀಡಲಾಗುತ್ತಿದೆ ಎಂದರು.

ಒಂದು ವರ್ಷದ ವ್ಯವಹಾರದಲ್ಲಿ ಸಂಘವು 1.6 ಲಕ್ಷ ಲಾಭ ಬಂದಿದೆ, ಷೇರುದಾರರಿಗೆ ಮತ್ತು ಜಾನುವಾರುಗಳಿಗೆ ವಿಮೆ ಸೌಲಭ್ಯವನ್ನು ಕೂಡ ನೀಡಲಾಗಿದೆ,ಮುಂದಿನ ದಿನಗಳಲ್ಲಿಯೂ ಕೂಡ ರೈತರಿಗೆ ಅನುಕೂಲವಾಗುವಂತ ಸೌಲಭ್ಯಗಳನ್ನು ನೀಡಲಾಗುವುದ ಎಂದರು.

nudikarnataka.com

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್ ಮಂಜುಳ ಮಾತನಾಡಿ, 2022-23ನೇ ಸಾಲಿನ ಆಡಿಟ್ ಆದ ಜಮಾಖರ್ಚು, ಲಾಭನಷ್ಟ ಸೇರಿದಂತೆ ಸಂಘದಲ್ಲಿ ನಡೆದಿರುವ ವ್ಯವಹಾರದ ಬಗ್ಗೆ ಸಭೆಗೆ ತಿಳಿಸಿ ಷೇರುದಾರರಿಂದ ಅಭಿಪ್ರಾಯವನ್ನು ಪಡೆದರು.

ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಮೂರು ಮಂದಿ ರೈತ ಮಹಿಳೆಯರನ್ನು ಅಭಿನಂದಿಸಿ ಪ್ರಶಸ್ತಿಯನ್ನು ನೀಡಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಜನಕರಾಜಲಿಂಗೇಗೌಡ, ನಿರ್ದೇಶಕರಾದ ಕಮಲಮ್ಮ, ಕಾಳಮ್ಮ, ನಾಗಮ್ಮ, ಪಾರ್ವತಿ, ಪುಷ್ಟ ಗುರುದೇವರಾಧ್ಯ, ಭಾರತೀ ಶಿವಲಿಂಗಯ್ಯ, ಶ್ವೇತ ಮರಿಸ್ವಾಮಿ,ಮಾದಮ್ಮ ಯಾಲಕ್ಕಿಗೌಡ, ಬೇಬಮ್ಮ, ಹಾಲು ಪರೀಕ್ಷಕ ಸಿ.ರತ್ನ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!