Friday, November 20, 2026

ಪ್ರಾಯೋಗಿಕ ಆವೃತ್ತಿ

ಆರ್ಥಿಕ ಅಭಿವೃದ್ದಿಗೆ ಸಹಕಾರ ಸಂಘಗಳು ಅತ್ಯವಶ್ಯಕ- ಯಶಸ್ವಿನಿ ಲೋಕೇಶ್

ರಾಷ್ಟ್ರೀಯ ಮೀನುಗಾರರ ಸಂಘದ ಆರ್ಥಿಕ ನೆರವನ್ನು ಜಿಲ್ಲಾ ಸಂಘದ ಆಭಿವೃದ್ದಿಗೆ ದೊರಕಿಲು ಶ್ರಮಿಸುತ್ತೇನೆ ಎಂದು ರಾಷ್ಟ್ರೀಯ ಮೀನುಗಾರ ಸಂಘದ ರಾಜ್ಯ ಘಟಕದ ನೂತನ ಕಾರ್ಯಾಧ್ಯಕ್ಷ ಯಶಸ್ವಿನಿ ಲೋಕೇಶ್ ಹೇಳಿದರು.

ಮಂಡ್ ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಗಂಗಮಸ್ಥರ ಸಂಘ ಮತ್ತು ಮೀನುಗಾರರು ಆಯೋಜಿಸಿದ್ದ ಮೀನುಗಾರರ ಕುಂದು ಕೊರತೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಮೀನುಗಾರ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸ್ಥಾನವು ಡಿಸೆಂಬರ್ ತಿಂಗಳಿಗೆ ಅಧಿಕಾರ ಹಸ್ಥಾಂತರವಾಗಲಿದೆ, ತಕ್ಷಣವೇ ಜಿಲ್ಲೆಯಲ್ಲಿ ಸಂಘದ ಚಟುವಟಿಕೆ ಮತ್ತು ನೂತನ ಪ್ರವರ್ತಕರನ್ನು ಆಯ್ಕೆಮಾಡಿ ಅಭಿವೃದ್ದಿಗೆ ಸಂಕಲ್ಪ ಮಾಡೋಣ ಎಂದು ನುಡಿದರು.

ಜಿಲ್ಲೆಯ ಋಣ ತೀರಿಸಲು ಮತ್ತು ಸಮುದಾಯದ ಕಷ್ಟ ಸುಖಗಳಿಗೆ ಸ್ಪಂದಿಸಲು ಶಕ್ತಿ ಬಂದಿದೆ, ಎಲ್ಲರೂ ಸದುಪಯೋಗ ಪಡಿಸಿಕೊಳ್ಳೋಣ, ಒಗ್ಗಟ್ಟಿನ ಸೂತ್ರದಿಂದ ಮಾತ್ರ ಸಾಧಿಸಲು ಸಾಧ್ಯ, ಒಮ್ಮತದಿಂದ ಎಲ್ಲರೂ ಸಾಗೋಣ ಎಂದರು.

ಮೊದಲು ಜಿಲ್ಲಾ ಮೀನುಗಾರರ ಸಹಕಾರ ಸಂಘಗಳ ಒಕ್ಕೂಟ ರಚನೆ ಸಂಕ್ಪಲವಾಗಿದೆ, ಒಗ್ಗಟ್ಟಿನಂದ ಮಾಡಿ, ಜಿಲ್ಲಾ ಸಂಘಕ್ಕೆ ಆರ್ಥಿಕ ನೆರವು ಬರುವಂತೆ ಕಾರ್ಯರೂಪಿಸೋಣ, ಸಮುದಾಯಭವನ, ವಿದ್ಯಾರ್ಥಿ ನಿಲಯ, ಇತರೆ ಅಭಿವೃದ್ದಿಗೆ ಆರ್ಥಿಕ ಬಲ ಲಭ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಜಿಲ್ಲಾ ಗಂಗಮಸ್ಥರ ಸಂಘ ಅಧ್ಯಕ್ಷ ರಮೇಶ್ ಮಾತನಾಡಿ, ಜಿಲ್ಲೆಯಲ್ಲಿರುವ ಗಂಗಮಸ್ಥರ ಸಮುದಾಯ ಮೀನುಗಾರು ಇತರೆ ಸಮುದಾಯಗಳ ಮೀನುಗಾರರಿಂದ ದಬ್ಬಾಳಿಗೆ-ದೌರ್ಜನ್ಯಗಳನ್ನು ಎದುರಿಸುತ್ತಿರುವ ದೂರುಗಳು ಬರುತ್ತಿವೆ ಎಂದು ಹೇಳಿದರು.

ಸಮಸ್ಯೆ ನಿವಾರಿಸಿ ಪರಿಹಾರ ಕಂಡುಕೊಳ್ಳಲು ಸಂಘ ನೇತೃತ್ವದಲ್ಲಿ ಜಿಲ್ಲಾ ಮೀನುಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಶ್ರೀ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘ ನಿಯಮಿತ ನೂತನ ಸಂಘಗಳನ್ನು ಜಿಲ್ಲೆಯಲ್ಲಿ ಪ್ರಾರಂಭ ಮಾಡಲು ಪೂರ್ವಭಾವಿ ಸಭೆ ಸಂಪನ್ನಗೊಂಡಿದೆ, ಪ್ರವರ್ತಕರನ್ನು ರಚಿಸಲು ಸನ್ನದ್ದರಾಗೋಣ ಎಂದರು.

ಸಭೆಯಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘದ ಸಹಕಾರ್ಯದರ್ಶಿ ಹಾಡ್ಯ ಉಮೇಶ್, ಈರಯ್ಯ,  ಬಿ ಲಿಂಗಯ್ಯ, ಚಿಕ್ಕಲಿಂಗಯ್ಯ ಬೂದನೂರು, ಹೊನ್ನಪ್ಪ, ಸಾತನೂರು ಕರಿಯಪ್ಪ,  ಮಾದೇವ, ಹುಚ್ಚೇಗೌಡ, ಆರ್ ಎಂ ಪಿ ಸಿ ಸಿ ನಿರ್ದೇಶಕ ಎಂ.ಪಿ ಶ್ರೀಧರ್, ಸಿದ್ದಯ್ಯ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ