ಗ್ರಾಮೀಣ ಭಾಗದ ಹದಿಹರೆಯದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಿ ಉನ್ನತ ದೃಷ್ಠಿಕೋನ ಮೂಡಿಸುವುದು ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಹೇಳಿದರು.
ಮಂಡ್ಯ ನಗರದ ರೋಟರಿ ಶಾಲೆಯಲ್ಲಿ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸುವರ್ಣ ಮಹೋತ್ಸವ ವರ್ಷ, ಸ್ವಾಮಿ ಶಾಂಭವಾನಂದ ಸ್ಮರಣಾರ್ಥ ಅಂತರ ಪ್ರೌಢಶಾಲಾ ಸಾಮಾನ್ಯ ಜ್ಞಾನ ಪರೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರೋಪ ಭಾಷಣ ಮಾಡಿದರು.
ಇಡೀ ರಾಜ್ಯಾದ್ಯಂತ ಸುಮಾರು 96 ಕೇಂದ್ರಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ ಪ್ರೌಢಶಾಲಾ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡಿ, ಮಕ್ಕಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿ, ಬಹುಮಾನ-ಪುಸ್ತಕಗಳನ್ನು ನೀಡುವುದು, ನಗದು ಬಹುಮಾನ ಕೊಡುವುದು ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಜಿಲ್ಲೆಯಲ್ಲಿ 7 ತಾಲೂಕುಗಳಲ್ಲೂ ಆಯ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿದೆ, ಬಹುಮಾನ ಪಡೆಯುವ ತವಕದಲ್ಲಿದ್ದಾರೆ, ದೇಶಕಟ್ಟುವ ನಿಟ್ಟಿನಲ್ಲಿ ಮ್ಯಾನ್ಮೇಕಿಂಗ್ ತತ್ವ ಇಟ್ಟುಕೊಂಡು ಶಿಕ್ಷಣವನ್ನು ಕೊಡುತ್ತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ತಾಳ್ಮೆ ರಾಷ್ಟಾಭಿಮಾನ ಮೂಡಿಸಿ, ಸತ್ಪ್ರಜೆ ಗಳನ್ನಾಗಿ ರೂಪಿಸು ಧ್ಯೇಯವಾಗಿದೆ ಎಂದು ನುಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಶಾಂಭವಾನಂದ ಅವರ ಸ್ಮರರ್ಣಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ನಡೆಸಿದ್ದೇವೆ, ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳನ್ನು ನಡೆಯುತ್ತಿದೆ, ನಗರದಲ್ಲಿ 300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ನುಡಿದರು.
ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆಮಾಡಿ, ಬಹುಮಾನ ನೀಡಲಾಗುವುದು, ಮುಂದಿನ ವರ್ಷವೂ ಕೂಡ ನಡೆಸಿಕೊಂಡು ಹೋಗುವ ಆಲೋಚನೆ ಇದೆ, 50 ವರ್ಷಗಳಿಂದ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯುತ್ತಿದೆ, ಪ್ರಥಮಬಾರಿಗೆ ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ರೋಟರಿ ಶಾಲೆ ಅಧ್ಯಕ್ಷ ಮಾದಪ್ಪ, ಕಾರ್ಯದರ್ಶಿ ಪ್ರಭಾಕರ್, ಡಿಡಿಪಿಐ ಶಿವರಾಮೇಗೌಡ, ಬಿಇಓ ಮಹದೇವು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಎಸ್.ಪಿ.ಸುರೇಶ್, ಹಳೇ ವಿದ್ಯಾರ್ಥಿಗಳಾದ ವೈದ್ಯ ಡಾ. ಕೃಷ್ಣಸ್ವಾಮಿ, ವಕೀಲ ಕೇಶವಮೂರ್ತಿ, ಮನೋಜ್ಞ, ಸಂದೀಪ್, ಡಾ.ಪ್ರಶಾಂತ್, ಡಾ.ಬಾಲಕೃಷ್ಣ, ಸಂತೃಪ್ತ, ಗಗನ್ ,ಲೋಕೇಶ್ ಮತ್ತಿತರರಿದ್ದರು.




