ಮೂಲತಃ ಕನ್ನಡತಿಯಾಗಿ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರ ಸಖತ್ ಬೋಲ್ಡ್ ಆದ ವಿಡಿಯೋವೊಂದು ಈಗ ಹೆಚ್ಚು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಸಖಲ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಅಸಲಿಗೆ ಅದು ನಟಿ ರಶ್ಮಿಕಾ ವಿಡಿಯೋ ಅಲ್ಲವೇ ಅಲ್ಲ, ಬೇರೊಬ್ಬ ಮಹಿಳೆಯ ದೇಹಕ್ಕೆ ರಶ್ಮಿಕಾ ಮುಖವನ್ನು ಡೀಪ್ ಫೇಕ್ ಮಾಡಿ ಚಿತ್ರಿಸಿರುವ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಹಲವರು ರಶ್ಮಿಕಾಗೆ ಡ್ರಸ್ ಸೆನ್ಸ್ ಬಗ್ಗೆ ನೀತಿಪಾಠ ಹೇಳಿದ್ದರು, ಆದರೆ ಈಗ ಅದು ರಶ್ಮಿಕಾ ವಿಡಿಯೋ ಅಲ್ಲವೇ ಅಲ್ಲ ಎಂಬುದು ಸಾಬೀತಾಗಿದೆ, ಈ ಎಡಿಟ್ ಮಾಡಿದ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ಬಾದ್ ಷಾ ಅಮಿತ್ ಬಚ್ಚನ್, ಹೀಗೆ ಒಬ್ಬ ನಟಿಯನ್ನು ಕೆಟ್ಟದಾಗಿ ಚಿತ್ರಿಸುವುದು ತಪ್ಪು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
The original video is of Zara Patel, a British-Indian girl with 415K followers on Instagram. She uploaded this video on Instagram on 9 October. (2/3) pic.twitter.com/MJwx8OldJU
— Abhishek (@AbhishekSay) November 5, 2023
“>
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಝರಾ ಪಟೀಲ್ (Zara Patel) ಎನ್ನುವವರದ್ದಾಗಿದೆ ಎಂದು ಅಭಿಷೇಕ್ ಎಂಬುವವರು ಬರೆದು ಕೊಂಡಿದ್ದಾರೆ.




