ನಾಗಮಂಗಲ ಪಟ್ಟಣದ ಸಾರೆಮೇಗಲಕೊಪ್ಪಲಿನ ರಾಮಣ್ಣ ಎಂಬುವವರ ಮನೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ವಾಸವಿದ್ದ ಉತ್ತರ ಕರ್ನಾಟಕದ ಯಾದಗಿರಿ ತಾಲ್ಲೂಕಿನ ಇಬ್ರಾಹಿಂ ಎಂಬ ಯುವಕ ಹಾಗೂ ಆತನೊಂದಿಗಿದ್ದ ಯುವತಿ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೆಲಮಂಗಲ ತಾಲ್ಲೂಕಿನ ಭೈರಸಂದ್ರ ಗ್ರಾಮದ ಅಪ್ರಾಪ್ತ ಯುವತಿ ಮೇಘನಾ ಹಾಗೂ ಇಬ್ರಾಹಿಂ ಕಳೆದ 2 ತಿಂಗಳಿಂದ ಸಾರೆಮೇಗಲಕೊಪ್ಪಲಿನಲ್ಲಿ ವಾಸವಾಗಿದ್ದರು. ಪ್ಯಾರಾ ಮೆಡಿಕಲ್ ಮಾಡುತ್ತಿರುವ ಮೇಘನಾ ಕಾಣೆಯಾಗಿರುವ ಬಗ್ಗೆ ಹುಡುಗಿಯ ತಾಯಿಯು ನೆಲಮಂಗಲದ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದರು.
ಕೆಲವು ಮಾಹಿತಿಗಳನ್ನು ಆಧರಿಸಿ ಜಾಡು ಹಿಡಿದ ಪೊಲೀಸರು, ಬಾಡಿಗೆ ಮನೆಯಲ್ಲಿದ್ದ ಯುವಕ- ಯುವತಿಯನ್ನು ವಶಕ್ಕೆ ತೆಗೆದುಕೊಂಡು ನೆಲಮಂಗಲದ ಠಾಣೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಪೋಲಿಸರೊಂದಿಗೆ ಯುವತಿಯ ತಾಯಿ ಕೂಡ ಇದ್ದರು.




