ಮಳವಳ್ಳಿ ತಾಲ್ಲೂಕಿನ ಮಾರ್ಕಾಲು ಕೆರೆಯಲ್ಲಿ ನೀರು ಇಲ್ಲದ ಕಾರಣ, ಸುತ್ತಮುತ್ತಲಿನ ಗ್ರಾಮಗಳ ಜನ ಜನುವಾರುಗಳು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ನೀರು ತುಂಬಿಸಬೇಕೆಂದು ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಒತ್ತಾಯಿಸಿ ಕಾಗೇಪುರದ ಕಾವೇರಿ ನೀರಾವರಿ ನಿಯಮದ ಅಧಿಕಾರಿಗೆ ಮನವಿ ಸಲ್ಲಿಸಿದರು.
ಆಲದಹಳ್ಳಿ, ಜಡಗನಪುರ, ಮಾರ್ಕಾಲು, ಕೊದನಕೊಪ್ಪಲು,ಅಕ್ಕಮ್ಮನಕೊಪ್ಪಲು ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುತ್ತಿರುವ ಕಾರಣ ಮಾರ್ಕಾಲು ಕೆರೆಗೆ ನೀರು ಬಿಡಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಮಾದೇಗೌಡ ಎ. ಎನ್,. ಉಪಾಧ್ಯಕ್ಷ ಪರಮೇಶ ಸಿ, ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ ಹೆಚ್ ಎಂ, ಮಂಡ್ಯ ಜಿಲ್ಲೆಯ ಯುವ ಘಟಕದ ಅಧ್ಯಕ್ಷ ಪ್ರಮೋದ್. ಎಸ್, ಆಲದಹಳ್ಳಿ, ಜಡಗನಪುರ, ಮಾರ್ಕಾಲು, ಕೊದನಕೊಪ್ಪಲು,ಅಕ್ಕಮ್ಮನಕೊಪ್ಪಲು ಗ್ರಾಮಸ್ಥರು ಭಾಗವಹಿಸಿದ್ದರು.




