Tuesday, November 24, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ದೀಪೋತ್ಸವ ಮಾಸದಲ್ಲಿ ನಾಗರಂಗದ ರಂಗಹಬ್ಬ

ನಾಗಮಂಗಲದಲ್ಲಿ ಸುಮಾರು 51 ವರ್ಷಗಳ ಕಾಲ ಸಾಂಸ್ಕೃತಿಕ ಸೇವೆಯಲ್ಲಿ ಕನ್ನಡ ಸಂಘವು ಕನ್ನಡ ಸಂಘ ಪ್ರತಿ ವರ್ಷದಂತೆ ಈ ಬಾರಿಯೂ ತಾಲೂಕಿನಲ್ಲಿ ದೀಪೋತ್ಸವದ ಮಾಸದ ಬೆಳಕಿ ನಡೆಯಲ್ಲಿ ರಂಗಹಬ್ಬ ಆಯೋಜನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಅಲೆಮೇಲು ತಿಳಿಸಿದರು.

ನಾಗಮಂಗಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಮೂಲೆಗಳಿಂದ ಹೆಸರಾಂತ ನಾಟಕ ತಂಡಗಳು 24 ರಿಂದ 30ರವರೆಗೆ ವಿವಿಧ ನಾಟಕಗಳು ಅಭಿನಯಿಸಲಿದ್ದು ಪ್ರತಿಯೊಂದು ನಾಟಕವು ವಿಭಿನ್ನಕತೆ ಹಾಸ್ಯ ಒಳಗೊಂಡಂತೆ ಆಸಕ್ತರನ್ನು ರಂಗಸುಗ್ಗಿ ನಾಗರಂಗ ನಾಟಕೋತ್ಸವ ಸೆಳೆಯಲು ವಿಶೇಷ ನಾಟಕಗಳು ಅಭಿನಯಗೊಳ್ಳಲಿವೆ ಎಂದರು.

ಅಭಿನಯಿಸುವ ನಾಟಕಗಳು

ನ.24ರಂದು ರೈಲು ಭೂತ
ನ.25 ರಂದು ದಕ್ಲ ಕಥಾದೇವಿ ಕಾವ್ಯ
ನ.26ರಂದು ಗೊರೂರು
ನ.27ರಂದು ಸಂಪೂರ್ಣ
ನ.28ರಂದು ರಕ್ತಾಕ್ಷಿ
ನ.29ರಂದುಮುಟ್ಟಿಸಿಕೊಂಡವನು
ನ.30ರಂದು ಶ್ರೀಕೃಷ್ಣ ಸಂಧಾನ

24ರಂದು ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀನಿರ್ಮಲಾ ನಂದನಾಥ ಮಹಾಸ್ವಾಮಿಜೀ  ದಿವ್ಯ ಸಾನಿಧ್ಯ ವಹಿಸಲಿದ್ದು, ಡಾ.ಗಜಾನನ ಶರ್ಮ, ಎಂ ಎಸ್ ಉಮೇಶ್, ಎನ್ ಮಂಗಳ ಶ್ರೀ ಲಕ್ಷ್ಮಿ ನಾರಾಯಣ್ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಂಘದ ಅಧ್ಯಕ್ಷ ಅಲೆ ಮೇಲು ವಹಿಸುವರು. ನಾಗರಂಗ ನಾಟಕೋತ್ಸವಕ್ಕೆ ತಾಲೂಕಿನ ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಹರೀಶ್ ಹಾಗೂ ನಟೇಶ್, ಬಾಲಕೃಷ್ಣ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ