✍️ ಶಿವಸುಂದರ್
ಹಲವು ವರ್ಷಗಳ ನಂತರ ಸಾವಿರಾರು ದುಡಿಯುವ ಜನರು ಒಟ್ಟು ಸೇರಿ ನಡೆಸಿದ ಮಹಾ ಧರಣಿ ತನ್ನಂತೆಯೇ ಒಂದು ಮಹಾ ಸಾಧನೆ…
ಇದಕ್ಕೆ ಕಾರಣರಾದ ಸಂಯುಕ್ತ ಹೋರಾಟ ಕರ್ನಾಟಕದ ಸಕಲರಿಗೂ ಅಭಿನಂದನೆಗಳು…
ಆದರೆ,
ಸ್ಥಳಕ್ಕೂ ಬರದೇ…
ಸಂಬಂಧ ಪಟ್ಟ ಅಧಿಕಾರಿಗಳ ಹಾಗೂ ಮಂತ್ರಿಗಳನ್ನೊಳಗೊಂಡ ಉನ್ನತ ಸಮಿತಿಯ ಸಭೆಯ ಬಗ್ಗೆ ಖಚಿತ ಭರವಸೆ ಯನ್ನು ನೀಡದೆ…
ಕೇವಲ ” ರೈತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಯ ಜೊತೆಗೆ ಚರ್ಚೆ”ಗೆ ಸಮಯ ಕೊಟ್ಟಿದ್ದೇ…
“ಮಹಾ ಧರಣಿಯ ಮಹಾ ಸಾಧನೆ” ಎಂಬಂತೆ ಮಾಡಿಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನಡೆ ..
ದುಡಿಯುವ ಜನರ ಘನತೆಗೆ ಮತ್ತು ಈ ಮಹಾಹೋರಾಟದ ಚಾರಿತ್ರಿಕತೆಗೆ ಮಾಡಿದ ಅವಮಾನವಲ್ಲವೇ…?
ಇವತ್ತು ಕಂದಾಯ ಮಂತ್ರಿ ಕೃಷ್ಣಾ ಭೈರೆ ಗೌಡರು:
” ಬಹುಪಾಲು ಬಗರ್ ಹುಕುಂ ಸಾಗುವಳಿದಾರರು ಅನರ್ಹರು ಮತ್ತು ಸಾಗುವಳಿಗೆ ಬೇಡಿಕೆ ಇರುವಷ್ಟು ಭೂಮಿಯೇ ಇಲ್ಲ”
ಎಂದು ಹೇಳಿಕೆ ನೀಡಿದ್ದಾರೆ…
ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ ಎಂಬುದು ಮಹಾಧರಣಿಯ ಪ್ರಮುಖ ಬೇಡಿಕೆಯಲ್ಲಿ ಒಂದಾಗಿದ್ದ ಅಂಶ…
ಇಂಥ ಬೀಸು ಹೇಳಿಕೆಗಳು ಮತ್ತು ನಡೆಗಳು ಕಾಂಗ್ರೇಸ್ ನ ಪಾರಂಪರಿಕ ಜನವಿರೋಧಿ ನೀತಿಗಳ ಮುಂದುವರಿಕೆಯ ಮುನ್ಸೂಚನೆ ಯನ್ನೇ ನೀಡುತ್ತಿದೆ…
.
ಅವರು ಧರಣಿಯಲ್ಲಿ ಮನವಿ ಸ್ವೀಕರಿಸುವಾಗಲೂ *ಚರ್ಚೆಗೆ ಸಮಯ ಕೊಡುತ್ತೇವೆಯೇ ಹೊರತು ಸಮಸ್ಯೆಗಳನ್ನೆಲ್ಲ ಈಡೇರಿಸುತ್ತೇವೆಂಬ ಭರವಸೆ ಕೊಡಲಾರೆ* ಎಂದೇ ಹೇಳಿದ್ದರು…
ಕಾಂಗ್ರೆಸ್ ನೊಳಗೆ ಇರುವ ಕೆಲವು ಸಜ್ಜನರ ಸದಾಶಯಗಳು ಏನೇ ಆಗಿದ್ದರೂ….
ಕಳೆದ ಆರು ತಿಂಗಳಲ್ಲಿ ಒಂದು ಸರ್ಕಾರವಾಗಿ ಕಾಂಗ್ರೇಸ್ ಪಕ್ಷವು (ಗ್ಯಾರಂಟಿ ಗಳನ್ನು ಹೊರತು ಪಡಿಸಿ) ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಕೋಮು ವಿಷಯಗಳಲ್ಲೂ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ
ಗುಣಾತ್ಮಕವಾಗಿ ಭಿನ್ನಾವಾದ
ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ…
ಹಾಗೇ ನೋಡಿದರೆ ಕಾಂಗ್ರೇಸ್ ತನ್ನ ರಾಜಕೀಯ, ಹಾಗೂ ವರ್ಗ ಹಿತಾಸಕ್ತಿಗಳ ಬಗ್ಗೆ ಸ್ಪಷ್ಟವಾಗಿಯೇ ಇದೆ…
ಹೀಗಾಗಿ ಮಹಾ ಧರಣಿಯಲ್ಲಿ ಮೊಳಕೆಯೋಡೆದಿರುವ ಜನ ಹೋರಾಟದ ಮಹಾ ಸಂಕಲ್ಪ…
ಮಹಾ ಮಾತುಕತೆಯ ಮಿತಿಯ ಬಗ್ಗೆ ಜನರಲ್ಲಿ ಅರಿವು ಉಂಟು ಮಾಡಿ…
ಮಹಾ ಸಂಘರ್ಷಕ್ಕೆಅಣಿಯಾಗಬೇಕಿರುವುದು… ಹಗಲಿನಷ್ಟೇ ಸ್ಪಷ್ಟ.. ಅಲ್ಲವೇ?




