ಮಂಡ್ಯ ಜಿಲ್ಲೆಯಲ್ಲಿರುವ ವಿಕಲಚೇತನರ ಹಿತಕಾಯುವುದೇ ಎಂಓಬಿ ಗ್ರಾಮೀಣ ಆರೋಗ್ಯ ಕೇಂದ್ರ ಧ್ಯೇಯವಾಗಿದೆ ಎಂದು ಎಂಓಬಿ ಗ್ರಾಮೀಣ ಆರೋಗ್ಯ ಕೇಂದ್ರದ ಸಂಸ್ಥಾಪಕಿ ಸಿಸ್ಟರ್ ಲೀಲಾ ಹೇಳಿದರು.
ಮಂಡ್ಯದ ನೆಹರುನಗರದಲ್ಲಿರುವ ಎಂಓಬಿ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಪ್ರೊ ವಿಷನ್ ಏಷ್ಯಾ ಸಂಸ್ಥೆ ಬೆಂಗಳೂರು, ಬಾಸ್ಕರ್ ಮತ್ತು ನಂದೀಶ್ ಇವರ ವತಿಯಿಂದ ಆಯೋಜಿಸಿದ್ದ ವಿಕಲಚೇತನರಿಗೆ ವೀಲ್ಚೇರ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಕಲಚೇತರಿಗೆ ವೀಲ್ಚೇರ್ಗಳನ್ನು ಮಂಡ್ಯ, ಮಳವಳ್ಳಿ, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ಶ್ರೀರಂಗಪಟ್ಟಣ ತಾಲೂಕು ಸೇರಿದಂತೆ ಮಂಡ್ಯ ನಗರ ಪ್ರದೇಶಗಳಲ್ಲಿರುವ ಹಲವು ಜನರಿಗೆ ಆರೋಗ್ಯಸೇವೆ, ಸಲಕರಣೆಗಳನ್ನು ನೀಡುತ್ತ ಬರುತ್ತಿದೆ ಎಂದರು.
ವಿಕಲಚೇತರಿನರಿಗೆ ನೀಡುವ ಸಲಕರಣೆಗಳು ಬಳಕೆಯಾಗಿ 5-6 ವರ್ಷಗಳು ಮಾತ್ರ ಬಾಳಿಕೆ ಬರುತ್ತವೆ, ಮತ್ತೆ ಮತ್ತೆ ಸಲಕರಣೆಗಳನ್ನು ನೀಡಲಾಗುತ್ತದೆ, ಇಂದು 30 ಮಂದಿಗೆ ಪ್ರೊ ವಿಷನ್ ಏಷ್ಯಾ ಸಂಸ್ಥೆ ಬೆಂಗಳೂರು, ಬಾಸ್ಕರ್ ಮತ್ತು ನಂದೀಶ್ ಇವರ ಸಹಕಾರದಲ್ಲಿ ವೀಲ್ಚೇರ್ ಸೈಕಲ್ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೇಜ್ ಇಂಡಸ್ಟಿçಯಲ್ ಸಂಸ್ಥೆ(ಜಾಕಿ) ಪ್ರೊಡಕ್ಷನ್ ಜನರಲ್ ಮ್ಯಾನೇಜರ್ ಬಾಬುರಾಜ್, ಶ್ರೀಧರ್, ಜೆಪಿ ಸಂಸ್ಥೆಯ ಮುನಿಸ್ವಾಮಿ, ಪ್ರೊ ವಿಷನ್ ಏಷ್ಯಾ ಸಂಸ್ಥೆಯ ಕೃಪಾಪಾಲ್ಸ್, ಎಂಓಬಿ ಗ್ರಾಮೀಣ ಆರೋಗ್ಯ ಕೇಂದ್ರದ ನಿರ್ದೇಶಕಿ ಸಿಸ್ಟರ್ ಪ್ರಿಂಟೋ, ಕಾರ್ಯಕ್ರಮ ಸಂಯೋಜಕ ಬಾಲು, ಸಂಚಾಲಕ ದೇವರಾಜು, ಲೆಕ್ಕ ಪರಿಶೋಧಕಿ ರೀಸಾ ಮತ್ತಿತರರಿದ್ದರು.




